Advertisement

ಚಲಿಸುತ್ತಿದ್ದಾಗ ಕಳಚಿದ ಚಕ್ರ: ಕಾರ್ಮಿಕರು ಅದೃಷ್ಟವಶಾತ್ ಪಾರು

11:38 PM Feb 16, 2023 | Team Udayavani |

ಮಡಿಕೇರಿ: ತೋಟದ ಕೆಲಸಕ್ಕೆಂದು ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಪಿಕ್‌ಅಪ್‌ ವಾಹನದ ಚಕ್ರ ಕಳಚಿದ ಪರಿಣಾಮ ಭಾರೀ ಅಪಘಾತದಿಂದ ಕಾರ್ಮಿಕರು ಪಾರಾದ ಘಟನೆ ನಾಪೋಕ್ಲು ಪಾರಾಣೆ ಮುಖ್ಯ ರಸ್ತೆಯ ಬೇತು ಗ್ರಾಮದ ತಿರುವಿನಲ್ಲಿ ಬುಧವಾರ ಸಂಭವಿಸಿದೆ.

Advertisement

ಎಮ್ಮೆಮಾಡು ಕೂರುಳಿ ಗ್ರಾಮದಿಂದ ತೋಟದ ಮಾಲಕರೊಬ್ಬರು ಕಾರ್ಮಿಕರನ್ನು ಸಾಗಿಸುತ್ತಿದ್ದಾಗ ವಾಹನದ ಆಕ್ಸಿಲ್‌ ತುಂಡಾದ ಪರಿಣಾಮ ಚಕ್ರ ಕಳಚಿಕೊಂಡಿತು. ಈ ದೃಶ್ಯ ಸ್ಥಳೀಯ ಆಟೋ ಚಾಲಕರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ವೈರಲ್‌ ಆಗಿದೆ. ಚಕ್ರ ಕಳಚುತ್ತಿದ್ದಂತೆ ಸುಮಾರು 20 ಮೀ. ದೂರ ಚಲಿಸಿದರೂ ವಾಹನ ಪಲ್ಟಿಯಾಗದಂತೆ ಚಾಲಕ ಸಮಯ ಪ್ರಜ್ಞೆ ಮೆರೆದು ನಿಯಂತ್ರಿಸಿದ್ದು, ಭಾರೀ ಅನಾಹುತ ತಪ್ಪಿದಂತಾಗಿದೆ. ವಾಹನದಲ್ಲಿ ಸಣ್ಣಮಕ್ಕಳ ಸಹಿತ 15ಕ್ಕೂ ಅಧಿಕ ಕಾರ್ಮಿಕರಿದ್ದು ಅದೃಷ್ಟವಶಾತ್‌ ಅಪಾಯದಿಂದ ಪಾರಾಗಿದ್ದಾರೆ.

ನಾಪೋಕ್ಲು ವ್ಯಾಪ್ತಿಯಲ್ಲಿ ಕಾಫಿ, ಕಾಳುಮೆಣಸು ಕೊçಲು ಬಿರುಸಿನಿಂದ ಸಾಗುತ್ತಿದ್ದು, ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಕಾರ್ಮಿಕರು ಆಗಮಿಸುತ್ತಿದ್ದಾರೆ. ತೋಟದ ಮಾಲಕರು ತಮ್ಮ ಅಗತ್ಯಕ್ಕೆ ತಕ್ಕಂತೆ ಅವರನ್ನು ಗೂಡ್ಸ್ ವಾಹನಗಳಲ್ಲಿ ಕರೆದೊಯುತ್ತಿದ್ದಾರೆ. ಗೂಡ್ಸ್ ವಾಹನಗಳಲ್ಲಿ ಜನರ ಸಾಗಾಟ ಕಾನೂನು ಬಾಹಿರವಾಗಿದ್ದರೂ ನಿರಂತರ ನಡೆಯುತ್ತಿದೆ ಎಂದು ನಾಪೋಕ್ಲು ವಾಹನ ಚಾಲಕ ಮತ್ತು ಮಾಲಕರ ಸಂಘದ ಅಧ್ಯಕ್ಷ ಅಬ್ದುಲ್‌ ರಜಾಕ್‌ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next