Advertisement
ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ, ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್ ಕಂದೆಗಾಲ್, ಜಿಲ್ಲಾ ಸಮಿತಿ ಅಧ್ಯಕ್ಷ ಎಚ್.ಸಣ್ಣಪ್ಪ ಅವರುಗಳ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಗಾಂಧಿ ಮಂಟಪದ ಬಳಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಸಾಗಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
Related Articles
Advertisement
ಕುಶಾಲನಗರ ಹೋಬಳಿ 6ನೇ ಹೊಸಕೋಟೆಯ ಅಂದಾನಿಪುರದಲ್ಲಿರುವ 70 ಬಡ ಮತ್ತು ದಲಿತ ಕುಟುಂಬಗಳು ಸಾಗುವಳಿ ಮಾಡುತ್ತಿರುವ ಭೂಮಿಯನ್ನು ಪೊಲೀಸ್ ಇಲಾಖೆಗೆ ಸೇರಿಸಿರುವುದನ್ನು ರದ್ದುಗೊಳಿಸಿ, ಸಾಗುವಳಿ ಮಾಡಿರುವ ಬಡವರಿಗೆ ಮತ್ತು ದಲಿತರಿಗೆ ಹಕ್ಕುಪತ್ರ ನೀಡಬೇಕು, ದಿಡ್ಡಳ್ಳಿಯಿಂದ ಬಸವನಹಳ್ಳಿ ಬ್ಯಾಡಗೊಟ್ಟಕ್ಕೆ ಸ್ಥಳಾಂತರಿಸಿರುವ ಆದಿವಾಸಿಗಳಿಗೆ ಉದ್ಯೋಗ ದೊರಕಿ ಸಿಕೊಡಬೇಕು, ತಲಾ 3 ಏಕರೆ ಕೃಷಿ ಭೂಮಿ ನೀಡಬೇಕು, ನಾಗರಹೊಳೆ ಅರಣ್ಯದ ಗೋಣಿಗದ್ದೆ ಕೊಡಂಗೆ ಹಾಡಿಯ ಜನರಿಗೆ ಹಕ್ಕುಪತ್ರ ನೀಡುವುದರೊಂದಿಗೆ ಮೂಲಭೂತ ಸೌಕರ್ಯದೊಂದಿಗೆ ಅರಣ್ಯದಂಚಿನಲ್ಲಿ ಭೂಮಿ ನೀಡಿ ಹಕ್ಕು ಪತ್ರ ನೀಡಬೇಕು, ಜಿಲ್ಲೆಯಲ್ಲಿರುವ ಸಿ ಮತ್ತು ಡಿ ದರ್ಜೆಯ ಭೂಮಿಯನ್ನು ಕಂದಾಯ ಭೂಮಿಯಾಗಿ ಪರಿವರ್ತಿಸಿ ದಲಿತ ಆದಿವಾಸಿಗಳಿಗೆ, ಭೂಹೀನ ಬಡವರಿಗೆ ತಲಾ 3 ಏಕರೆ ಹಂಚಬೇಕು, ಸೋಮವಾರಪೇಟೆಯ ಕಿಬ್ಬೆಟ್ಟ ಗ್ರಾಮದ ಅಯ್ಯಪ್ಪ ಕಾಲೋನಿಯಲ್ಲಿ ಇರುವ ಕುಟುಂಬ ಹಾಗೂ ದಲಿತ ಕಾರ್ಮಿಕರಿಗೆ ಸರ್ವೆ ನಂ. 56/1 ರಲ್ಲಿ 3 ಏಕರೆ ನಿವೇಶನ ಹಂಚಬೇಕು ಮತ್ತು ಅಂಬೇಡ್ಕರ್ ಭವನಕ್ಕೆ 50 ಸೆಂಟ್ ಜಾಗ ನೀಡಬೇಕು, ಕರ್ನಾಟಕ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಎಚ್. ಜೆ. ಪ್ರಕಾಶ್, ಸದಸ್ಯ ಜಯಣ್ಣ, ಸಿಪಿಐಎಂಎಲ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಸ್.ಆರ್. ಮಂಜುನಾಥ್ ಸೇರಿದಂತೆ ಹಲವು ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು
ವಿಲೇವಾರಿ ಆಗಿಲ್ಲ ಜಿಲ್ಲೆಯ ಹಲವು ಭಾಗಗಳಲ್ಲಿ ದಲಿತರು, ಆದಿವಾಸಿಗಳೂ ಬಡ ರೈತರ ಕೂಲಿ ಕಾರ್ಮಿಕರು ಸ್ವಂತ ಭೂಮಿ ಇಲ್ಲದೆ ಉದ್ಯೋಗವಿಲ್ಲದೆ, ಸ್ವಂತ ನಿವೇಶನ ಇಲ್ಲದೇ ಪರದಾಡುತ್ತಿದ್ದು, ಇನ್ನು ಹಲವರು ಒಂದು, ಎರಡು ಏಕರೆ ಸರಕಾರಿ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತ ಹಲವು ವರ್ಷಗಳಿಂದ ಅರ್ಜಿ ಸಲ್ಲಿಸುತ್ತ ಇದ್ದರೂ, ಬಡವರ ಅರ್ಜಿಗಳು ವಿಲೇವಾರಿ ಆಗದೆ ಮೂಲೆ ಸೇರಿವೆಯೆಂದು ಸಂಘದ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್ ಕಂದೆಗಲ್ ಬೇಸರ ವ್ಯಕ್ತಪಡಿಸಿದರು.