ಮಡಿಕೇರಿ: ಅಗ್ನಿ ಆಕಸ್ಮಿಕದಿಂದ ಪೈಂಟ್, ಫ್ಯಾನ್ಸಿ ಮಳಿಗೆ ಹಾಗೂ ಗೋದಾಮು ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಗೋಣಿ ಕೊಪ್ಪಲಿನಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದೆ.
35 ವರ್ಷಗಳಿಂದ ಗೋಣಿ ಕೊಪ್ಪಲಿನಲ್ಲಿ ವ್ಯವಹಾರ ನಿರತ ರಾಗಿರುವ ರಾಜಸ್ಥಾನ ಮೂಲದ ಇಮ್ತಾರಾಂ ಅವರಿಗೆ ಸೇರಿದ ಮಳಿಗೆಗಳು ಇರುವ ಇಡೀ ಕಟ್ಟಡ ಬೆಂಕಿಗಾಹುತಿಯಾಗಿದೆ. ಪೈಂಟ್ ದಾಸ್ತಾನು ಸಂಪೂರ್ಣವಾಗಿ ಸುಟ್ಟು ಹೋಗಿದ್ದು, 80 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಗೋಣಿಕೊಪ್ಪ ಅಗ್ನಿಶಾಮಕ ದಳದ ಅಧಿಕಾರಿ ಪಳಂಗಪ್ಪ ಅವರ ನೇತೃತ್ವದ ತಂಡ ಅಗ್ನಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟಿತು. ಸಾರ್ವಜನಿಕರು ಕೂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು. ಇಮ್ತಾರಾಂ 35 ವರ್ಷಗಳಿಂದ ಗೋಣಿಕೊಪ್ಪಲಿನಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ.