Advertisement

ಮಡಿಕೇರಿ: ನಕ್ಸಲ್‌ ರೂಪೇಶ್‌ ವಿಚಾರಣೆ

12:25 AM Jun 10, 2022 | Team Udayavani |

ಮಡಿಕೇರಿ: ನಕ್ಸಲ್‌ ಸಂಘಟನೆಯ ಶಂಕಿತ ಮುಖಂಡ, ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ನಕ್ಸಲ್‌ ಪ್ರಕರಣ ದಾಖಲಾಗಿರುವ ರೂಪೇಶ್‌ನನ್ನು ಬಿಗಿ ಭದ್ರತೆಯಲ್ಲಿ ಗುರುವಾರ ಮಡಿಕೇರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

Advertisement

ಕೇರಳ ರಾಜ್ಯದ ವೈವೂರು ಕೇಂದ್ರ ಕಾರಾಗೃಹದಲ್ಲಿ ಬಂದಿಯಾಗಿರುವ ರೂಪೇಶ್‌ನನ್ನು ಬುಧವಾರ ಸಂಜೆ ಮಡಿಕೇರಿಗೆ ಕರೆತಂದು ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿರಿಸಲಾಗಿತ್ತು. ಗುರುವಾರ ಬೆಳಗ್ಗೆ  ಕೊಡಗು  ಕಮಾಂಡೋ ಮತ್ತು ಕೇರಳ ಥಂಡರ್‌ ಬೋಲ್ಟ್ ಕಮಾಂಡೋಗಳ ಬಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆತರಲಾಯಿತು. ಪೊಲೀಸ್‌ ವಾಹನದಿಂದ ಇಳಿಯು ತ್ತಿದ್ದಂತೆಯೇ “ಕಮುನಿಸ್ಟ್‌ ಸರಕಾರಗಳು ನವ ಉದಾರವಾದಿ ನೀತಿಗೆ ಜೋತು ಬಿದ್ದಿವೆ’ ಎಂದು ಅಸಮಾಧಾನದ ಘೋಷಣೆ ಕೂಗಿದ.

ಪ್ರಕರಣ :

2013ರ ಫೆಬ್ರವರಿ 1ರಂದು ಭಾಗಮಂಡಲ ಠಾಣೆ ವ್ಯಾಪ್ತಿಯ ಮುಂಡ್ರೋಟಿನಲ್ಲಿರುವ ಮಾಗುಂಡಿ ಎಂಬ ತೋಟದಲ್ಲಿ ರೂಪೇಶ್‌ ಮತ್ತಿತರರು ಕಾರ್ಮಿಕರಿಂದ ಬಲವಂತ ವಾಗಿ ದಿನ ಬಳಕೆ ವಸ್ತುಗಳನ್ನು ಪಡೆದು ಸ್ಥಳದಿಂದ ಕಾಲ್ಕಿತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಕುರಿತು ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದರು.  ಅನಂತರ ನಡೆದ ಬೆಳವಣಿಗೆಯಲ್ಲಿ ರೂಪೇಶ್‌ ತಮಿಳುನಾಡಿನಲ್ಲಿ ಸೆರೆಸಿಕ್ಕಿದ್ದ. ನ್ಯಾಯಾಧೀಶರು ಮುಂದಿನ ವಿಚಾರಣೆಯನ್ನು ಜೂ. 24ಕ್ಕೆ  ನಿಗದಿಪಡಿಸಿ ದರು. ಆತನನ್ನು ಮತ್ತೆ ಕೇರಳದ ವೈವೂರು ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next