Advertisement

ಮಡಿಕೇರಿ-ಮಂಗಳೂರು ರಸ್ತೆ: ಲಘು ವಾಹನ ಸಂಚಾರಕ್ಕೆ ಮುಕ್ತ

11:43 PM Jul 27, 2022 | Team Udayavani |

ಮಡಿಕೇರಿ: ಕಳೆದ ಕೆಲವು ದಿನಗಳಿಂದ ವಾಹನ ಸಂಚಾರ ನಿಷೇಧಿಸಲ್ಪಟ್ಟಿದ್ದ ಮಡಿಕೇರಿ- ಮಂಗಳೂರು ರಾ. ಹೆ.275ರ ಮಡಿಕೇರಿ-ತಾಳತ್‌ಮನೆ ಜಂಕ್ಷನ್‌ವರೆಗಿನ ಮಾರ್ಗವನ್ನು ಇದೀಗ ಲಘುವಾಹನ ಸಂಚಾರಕ್ಕೆ ಮುಕ್ತ ಗೊಳಿಸಲಾಗಿದೆ.

Advertisement

ಈ ಸಂಬಂಧ ಜಿಲ್ಲಾಧಿಕಾರಿ ಡಾ| ಬಿ.ಸಿ.ಸತೀಶ ಅವರು ಆದೇಶ ಹೊರಡಿಸಿದ್ದಾರೆ. ಅದರಂತೆ ಮಡಿಕೇರಿಯ ಜನರಲ್‌ ತಿಮ್ಮಯ್ಯ ವೃತ್ತದಿಂದ ಜಿಲ್ಲಾಡಳಿತ ಭವನದ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ 7+1 ಸೀಟರ್‌ವರೆಗಿನ ವಾಹನಗಳು ದ್ವಿಮುಖವಾಗಿ ಸಂಚರಿಸಬಹುದಾಗಿದೆ.

ಉಳಿದಂತೆ 7+1 ಸೀಟರ್‌ಗಿಂತ ಹೆಚ್ಚಿನ ಸಾಮರ್ಥ್ಯದ 4 ಚಕ್ರ ವಾಹನ ಗಳು ಮಂಗಳೂರು ಕಡೆಗೆ ಏಕಮುಖ ವಾಗಿ ಸಂಚರಿಸಬಹುದು. ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ 4 ಚಕ್ರ ವಾಹನಗಳು ಮಂಗಳೂರಿನಿಂದ ಮಡಿಕೇರಿ ಕಡೆಗೆ ಸಂಪಾಜೆ – ತಾಳತ್ತ ಮನೆ- ಮೇಕೇರಿ ಮಾರ್ಗವಾಗಿ ಏಕಮುಖವಾಗಿ ಸಂಚರಿಸ ಬಹುದೆಂದು ಆದೇಶದಲ್ಲಿ ತಿಳಿಸಲಾಗಿದೆ.

16.2 ಟನ್‌ ಒಳಪಟ್ಟ ಸರಕು ಸಾಗಣೆವಾಹನಗಳು, ಬಸ್‌ಗಳು, ಅನಿಲ, ರಸಗೊಬ್ಬರ ಹಾಗೂ ಇಂಧನ ಸಾಗಣೆ ವಾಹನಗಳು ಎರಡೂ ರಸ್ತೆ ಗಳಲ್ಲಿ ಏಕಮುಖವಾಗಿ ಸಂಚರಿಸಬಹು ದೆಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next