Advertisement

Madikeri: ಪತಿ, ಪತ್ನಿ ಕಲಹ ಕೊಲೆಯಲ್ಲಿ ಅಂತ್ಯ

12:19 AM Sep 12, 2023 | Team Udayavani |

ಮಡಿಕೇರಿ: ಪತಿ, ಪತ್ನಿ ಕಲಹ ಪತ್ನಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ಮಡಿಕೇರಿ ನಗರದ ಕೈಗಾರಿಕಾ ಬಡಾವಣೆಯಲ್ಲಿ ನಡೆದಿದೆ. ಪಶ್ಚಿಮ ಬಂಗಾಲದ ರಾಧಿಕಾ (40) ಮೃತ ಮಹಿಳೆ.

Advertisement

ಅದೇ ರಾಜ್ಯದ ಪತಿ ರೋಷನ್‌ (30) ಬಂಧಿತ ಆರೋಪಿ ನಗರದ ಖಾಸಗಿ ವಸತಿಗೃಹದಲ್ಲಿ ಕೆಲಸ ಮಾಡುತ್ತಿದ್ದ ದಂಪತಿ ಕೈಗಾರಿಕಾ ಬಡಾವಣೆಯಲ್ಲಿ ವಾಸಿಸುತ್ತಿದ್ದರು. ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಕಲಹ ಏರ್ಪಟ್ಟು ಪತಿ ರೋಷನ್‌ ರಾಧಿಕಾಳ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ತೀವ್ರ ರಕ್ತಸ್ರಾವಗೊಂಡ ಮಹಿಳೆಯನ್ನು ನಗರದ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಯಿತಾದರು ಚಿಕಿತ್ಸೆ ಫ‌ಲಿಸದೆ ಮೃತಪಟ್ಟರು.

ಆರೋಪಿ ರೋಷನ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಸ್ಥಳಕ್ಕೆ ನಗರ ಠಾಣೆ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next