Advertisement

Madikeri; ಕಾಫಿಗೆ ಐತಿಹಾಸಿಕ ದಾಖಲೆ ಬೆಲೆ

12:35 AM Jul 12, 2024 | Team Udayavani |

ಮಡಿಕೇರಿ: ವಿಶ್ವದ ಪ್ರಮುಖ ಕಾಫಿ ಉತ್ಪಾದಕ ದೇಶವಾಗಿರುವ ವಿಯೆಟ್ನಾಂ ನಿಂದ ನಿಧಾನಗತಿಯ ಪೂರೈಕೆ ಯಿಂದಾಗಿ ರೋಬಸ್ಟಾ ಕಾಫಿ ಬೆಲೆ ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿದೆ.

Advertisement

ಅರೇಬಿಕಾ ಮತ್ತು ರೊಬಸ್ಟಾ ಪಾರ್ಚ್‌ ಮೆಂಟ್‌ ಕಾಫಿಗಳೆರಡೂ ಚೀಲಕ್ಕೆ 300ರಿಂದ 500 ರೂ. ವರೆಗೆ ಏರಿಕೆ ದಾಖಲಿಸಿವೆ.

ಬುಧವಾರ ದೇಶೀ ಮಾರು ಕಟ್ಟೆಯಲ್ಲಿ ಅರೆಬಿಕಾ ಪಾರ್ಚ್‌ ಮೆಂಟ್‌ ದರ 50 ಕೆ.ಜಿ.ಯ ಚೀಲವೊಂದಕ್ಕೆ 16,400 ರೂ. ಹಾಗೂ ರೊಬಸ್ಟಾ ಪಾರ್ಚ್‌ ಮೆಂಟ್‌ ಬೆಲೆ 17,500 ರೂ.ಗಳವರೆಗೂ ಏರಿಕೆ ದಾಖಲಿಸಿತು. ರೊಬಸ್ಟಾ ಚೆರಿ ದರ ಚೀಲಕ್ಕೆ 10 ಸಾವಿರ ತಲುಪಿದ್ದು, ಅರೇಬಿಕಾ ಚೆರಿ 9 ಸಾವಿರ ರೂ. ತಲುಪಿದೆ.

ಆದರೆ ಸ್ಥಳೀಯವಾಗಿ ಕಾಫಿ ಬೆಳೆಯುವ ಜಿಲ್ಲೆಗಳಲ್ಲಿ ಈ ಧಾರಣೆಯಲ್ಲಿ ಕಾಫಿ ಖರೀದಿ ಆಗುತ್ತಿಲ್ಲ. ಲಂಡನ್‌ ಕಾಫಿ ಮಾರು
ಕಟ್ಟೆಯಲ್ಲಿಯೂ ಕಾಫಿ ದರ ಮಂಗಳವಾರ ಸರ್ವಕಾಲಿಕ ಏರಿಕೆ ದಾಖಲಿಸಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next