Advertisement

Botswana; 2,492 ಕ್ಯಾರಟ್‌ ವಜ್ರ ಪತ್ತೆ: ಬೆಲೆ ಎಷ್ಟು ಗೊತ್ತೇ?

01:27 AM Aug 24, 2024 | Team Udayavani |

ಹೊಸದಿಲ್ಲಿ: ವಿಶ್ವದಲ್ಲೇ 2ನೇ ಅತೀದೊಡ್ಡ ವಜ್ರ ಎನಿಸಿಕೊಂಡಿರುವ ವಜ್ರದ ಕಲ್ಲೊಂದು ಬೋಟ್ಸ್‌ವಾನಾದ ಗಣಿಯಲ್ಲಿ ಪತ್ತೆಯಾಗಿದೆ. 2,492 ಕ್ಯಾರಟ್‌ ಹೊಂದಿರುವ ಈ ವಜ್ರದ ಆರಂಭಿಕ ಬೆಲೆಯೇ 330 ಕೋಟಿ ರೂ. ಇರಲಿದೆ ಎಂದು ಮಾಧ್ಯಮ ವೊಂದು ವರದಿ ಮಾಡಿದೆ.

Advertisement

ಈಗಾಗಲೇ ಈ ವಜ್ರವನ್ನು ಕೊಂಡುಕೊಳ್ಳಲು ಹಲವು ಕಂಪೆನಿಗಳು ಸಿದ್ಧತೆ ನಡೆಸಿರುವುದರಿಂದ ಇದರ ಬೆಲೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದು ಬೋಟ್ಸ್‌ವಾನಾದಲ್ಲಿ ಈವರೆಗೆ ದೊರೆತ ಅತೀ ದೊಡ್ಡ ವಜ್ರದ ಕಲ್ಲು ಎನಿಸಿಕೊಂಡಿದ್ದು, ಕಳೆದ 100 ವರ್ಷಗಳಲ್ಲೇ ಪತ್ತೆಯಾದ ಬೃಹತ್‌ ವಜ್ರವಾಗಿದೆ. ಈ ವಜ್ರವನ್ನು ಪ್ರದರ್ಶನಕ್ಕೆ ಇಡಲಾಗುವುದು ಎಂದು ಬೋಟ್ಸ್‌ ವಾನಾ ಸರಕಾರ‌ ಘೋಷಿಸಿದೆ.

2019ರಲ್ಲಿ ಇದೇ ಗಣಿಯಲ್ಲಿ ಪತ್ತೆ ಯಾಗಿದ್ದ 1758 ಕ್ಯಾರಟ್‌ನ ವಜ್ರವನ್ನು 2ನೇ ಅತಿದೊಡ್ಡ ವಜ್ರ ಎಂದು ಗುರುತಿ­ಸಲಾಗಿತ್ತು. ಇದನ್ನು ಫ್ರೆಂಚ್‌ ಫ್ಯಾಷನ್‌ ಹೌಸ್‌ ಲೂಯಿ ವಿಟ್ಟಾನ್‌ ಸಂಸ್ಥೆ ಖರೀದಿ ಮಾಡಿತ್ತು, ಆದರೆ ಬೆಲೆಯನ್ನು ಬಹಿರಂ­ಗ­ಪಡಿಸಿರಲಿಲ್ಲ. 1905ರಲ್ಲಿ ದಕ್ಷಿಣ ಆಫ್ರಿ­ಕಾದ ಕಲ್ಲಿನಾಲ್‌ನಲ್ಲಿ 3106 ಕ್ಯಾರಟ್‌ನ ವಜ್ರ ಪತ್ತೆಯಾಗಿತ್ತು, ಇದು ವಿಶ್ವದ ಅತೀದೊಡ್ಡ ವಜ್ರ ಎನಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next