Advertisement

Fake Document ಸೃಷ್ಟಿಸಿ ವಾಹನ ನೋಂದಣಿ: ದೂರು ದಾಖಲು

01:01 AM Sep 07, 2024 | Team Udayavani |

ಸಿದ್ದಾಪುರ: ನಕಲಿ ದಾಖಲೆ ಸೃಷ್ಟಿಸಿ ಕಾರು ನೋಂದಣಿ ಮಾಡಿದ್ದ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಬೆಳ್ವೆ ಗ್ರಾಮದ ಪ್ಲೋರಿನ್‌ ಫಿಲೋಮಿನಾ ಅವರು ತಮ್ಮ ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ಕುಂದಾಪುರ ಸಾಯಿ ಡ್ರೀಮ್‌ ಕಾರ್‌ ಶೋರೂಮ್‌ ಮಾಲಕ ನಾಗೇಂದ್ರ ಅವರಿಗೆ ಮೇ 13ರಂದು 5.90 ಲ. ರೂ.ಗೆ ಮಾರಾಟ ಮಾಡಿದ್ದರು. ಆ.29ರಂದು ನಾಗೇಂದ್ರ ಅವರು ಕಾರನ್ನು ಬೇರೆಯವರಿಗೆ ಮಾರಾಟ ಮಾಡಲು ಉಡುಪಿ ಆರ್‌ಟಿಒ ಕಚೇರಿಯಲ್ಲಿ ಸಿಸಿ ತೆಗೆದಾಗ, ಕಾರು ಧಾರವಾಡದ ಫಾರೂಕ್‌ ಅಹ್ಮದ್‌ ಖಾತಿಬ್‌ ಅವರ ಹೆಸರಲ್ಲಿ ದಾಖಲಾಗಿರುವುದು ಬೆಳಕಿಗೆ ಬಂದಿದೆ. ಇದರ ಹಿಂದೆ ಸತೀಶ ದೇವಾಡಿಗ ತ್ರಾಸಿ ಎಂಬವರ ಕೈವಾಡವೂ ಇದೆ ಎಂಬುದು ತಿಳಿಯಿತು.

ಸತೀಶ್‌ ಹಾಗೂ ಫಾರೂಕ್‌ ಸೇರಿ ನಕಲಿ ದಾಖಲೆ ಸೃಷ್ಟಿಸಿ ಧಾರವಾಡ ಆರ್‌ಟಿಒ ಕಚೇರಿಯಲ್ಲಿ ಬೇರೆ ವಾಹನಕ್ಕೆ ಪ್ಲೋರಿನ್‌ ಫಿಲೋಮಿನಾ ಅವರ ಕಾರಿನ ನಂಬರನ್ನು ಹಾಕಿ, ಫಾರೂಕ್‌ ಅಹ್ಮದ್‌ ಖಾತಿಬ್‌ ಹೆಸರಿನಲ್ಲಿ ದಾಖಲೆ ನೋಂದಣಿ ಮಾಡಲಾಗಿದೆ. ಆದ್ದರಿಂದ ಸತೀಶ ದೇವಾಡಿಗ ತ್ರಾಸಿ ಹಾಗೂ ಫಾರೂಕ್‌ ಅಹ್ಮದ್‌ ಖಾತಿಬ್‌ ವಿರುದ್ಧ ಕ್ರಮಕ್ಕಾಗಿ ಪ್ಲೋರಿನ್‌ ಫಿಲೋಮಿನಾ ಶಂಕರನಾರಾಯಣ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next