Advertisement

ಮಡಿಕೇರಿ : ಗಮನ ಸೆಳೆಯುತ್ತಿರುವ ಹಳೇ ನೋಟು ನಾಣ್ಯಗಳ ಪ್ರದರ್ಶನ

12:19 AM Nov 24, 2019 | Sriram |

ಮಡಿಕೇರಿ: ನಾಣ್ಯ ಶಾಸ್ತ್ರಜ್ಞ ಪಿ.ಕೆ.ಕೇಶವ ಮೂರ್ತಿ ಅವರು ಸಂಗ್ರಹಿಸಿರುವ ಹಳೇ ನೋಟುಗಳು ಹಾಗೂ ನಾಣ್ಯಗಳ 147ನೇ ಪ್ರದರ್ಶನಕ್ಕೆ ಶುಕ್ರವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ ಪೆನ್ನೆಕರ್‌ ಅವರು ಶುಕ್ರವಾರ ಚಾಲನೆ ನೀಡಿದರು.

Advertisement

ನಗರದ ಕೋಟೆ ಆವರಣದಲ್ಲಿರುವ ವಸ್ತು ಸಂಗ್ರಹಾಲಯದಲ್ಲಿ ಹಾಗೂ ಕೋಟೆಯಲ್ಲಿ ಏರ್ಪಡಿಸಿರುವ ಕೊಡಗು ಜಿಲ್ಲೆಯ ಐತಿಹಾಸಿಕ ಮತ್ತು ಪಾರಂಪರಿಕ ಕಟ್ಟಡಗಳ ಛಾಯಾಚಿತ್ರ ಪ್ರದರ್ಶನವನ್ನು ಎಸ್‌ಪಿ ಉದ್ಘಾಟಿಸಿದರು.

ಪ್ರದರ್ಶನದಲ್ಲಿ ಮೈಸೂರು ಒಡೆಯರು, ಬಹುಮನಿ ಸುಲ್ತಾನರು, ಕುಶಾನರು, ಶಾತವಾಹನರು, ಪಾಂಡ್ಯರು, ಮೊಘಲರ ಕಾಲದ ನಾಣ್ಯಗಳು, ವಿವಿಧ ರಾಷ್ಟ್ರಗಳ ನೋಟುಗಳು ವಸ್ತು ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿವೆ.

ಪಿ.ಕೆ.ಕೇಶವ ಮೂರ್ತಿ ಅಪರೂಪದ ನಾಣ್ಯ ನೋಟುಗಳನ್ನು ಸಂಗ್ರಹಿಸಿ ಪ್ರದರ್ಶನ ಮಾಡುತ್ತಿರುವುದು ವಿಶೇಷವಾಗಿದೆ. 1992 ರಲ್ಲಿ ನಗರದಲ್ಲಿ ಆರಂಭಿಸಿದ ಮೊದಲ ಪ್ರದರ್ಶನವು ಈಗ 147ನೇ ಪ್ರದರ್ಶನ ಕಾಣುತ್ತಿರುವುದು ವಿಶೇಷವಾಗಿದೆ.

ಹುಣಸೂರು ನಾಣ್ಯ ಶಾಸ್ತ್ರಜ್ಞರು ಮತ್ತು ಸಂಗ್ರಹಕಾರರಾದ ಪಿ.ಕೆ.ಕೇಶವ ಮೂರ್ತಿ ಅವರ 147 ನೇ ಪ್ರಾಚೀನ ನಾಣ್ಯ ಮತ್ತು ನೋಟುಗಳ ಪ್ರದರ್ಶನದಲ್ಲಿ ಕ್ರಿಸ್ತ ಪೂರ್ವ 5ನೇ ಶತಮಾನದಲ್ಲಿ ಬಳಕೆಗೆ ಬಂದ ಭಾರತದ ಮೊಟ್ಟ ಮೊದಲ ಪಂಚ್‌ ಮಾರ್ಕ್‌ ನಾಣ್ಯಗಳು, ಗ್ರೀಕ್‌, ರೋಮನ್‌, ಕುಶಾನರು, ಗುಪ್ತ ನಾಣ್ಯಗಳು, ಶಾತವಾಹನರು, ಕದಂಬ, ಚೋಳ, ಪಾಂಡ್ಯ ಮುಂತಾದ ಪ್ರಾಚೀನ ಭಾರತದ ನಾಣ್ಯಗಳು, ಮೊಘಲ್‌ ಸಾಮ್ರಾಜ್ಯದ ಅಕºರ್‌, ಜಾಹಂಗೀರ್‌, ಷಹಜಹಾನ್‌, ಔರಂಗಜೇಬ್‌ರ ನಾಣ್ಯಗಳು, ವಿಜಯನಗರ ಸಾಮ್ರಾಜ್ಯದ ಕೃಷದೇವರಾಯ, ಅಚ್ಚುತರಾಯ, ಪ್ರತಾಪ ದೇವರಾಯರ ನಾಣ್ಯಗಳು, ಮೈಸೂರು, ಬಿಜಾಪುರ ತಿರುವಾಂಕೂರು, ಹೈದರಾಬಾದ್‌, ಕಛ…, ಬರೋಡ, ಗ್ವಾಲಿಯರ್‌, ಮೇವಾರ ಮುಂತಾದ ಭಾರತೀಯ ರಾಜ್ಯ ಸಂಸ್ಥಾನಗಳ ನಾಣ್ಯಗಳು, ಸ್ವಾತಂತ್ರ್ಯ ಪೂರ್ವದ ಬ್ರಿಟೀಷ್‌, ಪೋರ್ಚ್‌ಗೀಸರ ಮತ್ತು ಸ್ವಾತಂತ್ರ್ಯ ಭಾರತದ ನಾಣ್ಯ, ನೋಟುಗಳು, ಸ್ಮರಣಾರ್ಥ ಬಿಡುಗಡೆಯಾದ 100, 50, 20, 10 ರೂ.ಗಳ ನಾಣ್ಯಗಳು, ಚಲಾವಣೆಯಿಂದ ಹಿಂತೆಗೆದುಕೊಂಡ ಸಾವಿರ ರೂಪಾಯಿ ನೋಟುಗಳು, ನೂರಾರು ದೇಶ-ವಿದೇಶಗಳ ನಾಣ್ಯಗಳು, ತಾಮ್ರ, ಚಿನ್ನ, ಬೆಳ್ಳಿ, ಸೀಸ ಹಾಗೂ ಹಿತ್ತಾಳೆ ಮುಂತಾದ ಲೋಹಗಳ ನಾಣ್ಯಗಳು, ನೂರಾರು ದೇಶ-ವಿದೇಶದಿಂದ ಮಾಡಿದ ನೋಟುಗಳು, ಇತ್ತೀಚಿನ ಪ್ಲಾಸ್ಟಿಕ್‌ ನೋಟುಗಳು, ನೂರಾರು ವರ್ಷಗಳ ಹಿಂದಿನ ಛಾಪಾ ಕಾಗದಗಳು ಮತ್ತಿತರವನ್ನು ವೀಕ್ಷಿಸಬಹುದಾಗಿದೆ.

Advertisement

ಐತಿಹಾಸಿಕ ಹಾಗೂ ಪಾರಂಪರಿಕ ಸ್ಥಳಗಳು ಮತ್ತು ಕಟ್ಟಡಗಳ ಛಾಯಾ ಚಿತ್ರಗಳ ಪ್ರದರ್ಶನವನ್ನು ನಾಣ್ಯ ಸಂಗ್ರಹಕಾರ ಡಾ.ಎಂ.ಜಿ. ಪಾಟ್ಕಾರ್‌ಉದ್ಘಾಟಿಸಿದ್ದರು. ಡಾ.ಜಯಲಕ್ಷಿ¾ ಪಾಟ್ಕಾರ್‌ ಮತ್ತು ಸರ್ಕಾರಿ ವಸ್ತು$¤ಸಂಗ್ರಹಾಲಯದ ಕ್ಯೂರೇಟರ್‌ ರೇಖಾ ಮತ್ತು ಇತರರು ಇದರಲ್ಲಿ ಪಾಲ್ಗೊಂಡಿದ್ದರು.

ಪುರಾತತ್ವ ಸಂಗ್ರಹಾಲಯ ಮತ್ತು ಪಾರಂಪರಿಕ ಇಲಾಖೆಗೆ ಹಳೇ ನಾಣ್ಯಗಳು ಹಾಗೂ ಕೊಡಗಿನ ಹಳೇ ನಾಣ್ಯಗಳನ್ನು É ಹಸ್ತಾಂತರಿಸಿದರು

Advertisement

Udayavani is now on Telegram. Click here to join our channel and stay updated with the latest news.

Next