ಹೊಸದಿಲ್ಲಿ: ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಶುಕ್ರವಾರ ವಿಧಾನಸಭೆಯ ಮತದಾನದ ವೇಳೆ ಮಧ್ಯಪ್ರದೇಶದಲ್ಲಿ ಮತದಾನದ ವೇಳೆ ಹಿಂಸಾಚಾರದ ಘಟನೆಗಳು ವರದಿಯಾಗಿದ್ದು, ಶುಕ್ರವಾರ ಸಂಜೆ ಛತ್ತೀಸ್‌ಗಢದಲ್ಲಿ ನಕ್ಸಲರ ದಾಳಿಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ.
ಮಧ್ಯಪ್ರದೇಶದಲ್ಲಿ ಮತದಾನದ ವೇಳೆ ಭಿಂಡ್‌ನ ಮೆಹಗಾಂವ್ ಸೀಟ್‌ನ ಮನ್‌ಹಾದ್ ಗ್ರಾಮದಲ್ಲಿ ಮತದಾನ ಕೇಂದ್ರದ ಹೊರಗೆ ಕಲ್ಲು ತೂರಾಟ ನಡೆದಿದೆ. ದಿಮಾನಿ ಕ್ಷೇತ್ರದಲ್ಲಿ ಮತದಾನದ ವೇಳೆ ಘರ್ಷಣೆ ನಡೆದು ಇಬ್ಬರು ಗಾಯಗೊಂಡಿದ್ದಾರೆ.ಇಂದೋರ್‌ನ ಅಸೆಂಬ್ಲಿ 4 ಸ್ಥಾನಕ್ಕೆ ಮತದಾನದ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಮತ್ತೊಂದು ಘರ್ಷಣೆ ನಡೆದಿದೆ. ಪರಿಸ್ಥಿತಿ ನಿಭಾಯಿಸಲು ಪೊಲೀಸರು ಎರಡೂ ಕಡೆಯವರ ಮೇಲೆ ಲಾಠಿ ಪ್ರಹಾರ ನಡೆಸಿದರು.
ಶುಕ್ರವಾರ ಸಂಜೆ ಛತ್ತೀಸ್‌ಗಢದ ಬಿಂದ್ರನವಗಢ ಪ್ರದೇಶದಲ್ಲಿ ನಕ್ಸಲರು ಮತಗಟ್ಟೆಯನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಯೋಧ ಹುತಾತ್ಮರಾಗಿದ್ದಾರೆ. ನಕ್ಸಲರು ಸುಧಾರಿತ ಸ್ಫೋಟಕ ಸಾಧನ (IED) ಬಳಸಿ ಸ್ಫೋಟ ನಡೆಸಿದ್ದಾರೆ. ಧಮ್ತಾರಿ ಪ್ರದೇಶದಲ್ಲಿ ನಕ್ಸಲರು ಎರಡು ಕಡಿಮೆ ತೀವ್ರತೆಯ IED ಸ್ಫೋಟಿಸಿದ ಒಂದು ದಿನದ ನಂತರ ಈ ಘಟನೆ ನಡೆದಿದೆ.
ಛತ್ತೀಸ್‌ಗಢದಲ್ಲಿ ಎರಡನೇ ಹಂತದ ಮತದಾನಕ್ಕೆ ಜನರು ಚಲಾಯಿಸಿದ್ದು, 19 ಜಿಲ್ಲೆಗಳ 70 ವಿಧಾನಸಭಾ ಸ್ಥಾನಗಳಿಗೆ 958 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಧ್ಯಪ್ರದೇಶದಲ್ಲಿ ರಾಜ್ಯ ವಿಧಾನಸಭೆಯ 230 ಸ್ಥಾನಗಳಿಗೆ 2,000ಕ್ಕೂ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಸಂಜೆ 5 ಗಂಟೆಯವರೆಗೆ ಮಧ್ಯಪ್ರದೇಶದಲ್ಲಿ ಶೇ.71.11ರಷ್ಟು ಮತದಾನವಾಗಿದ್ದರೆ, ಛತ್ತೀಸ್‌ಗಢದಲ್ಲಿ ಎರಡನೇ ಹಂತದ ಮತದಾನದಲ್ಲಿ ಶೇ.67.34ರಷ್ಟು ಮತದಾನವಾಗಿದೆ.