Advertisement

ಅರೆಬೆತ್ತಲೆ ಮಾಡಿ ಬಾಯಿಯಿಂದ ಶೂ ಎತ್ತಿಸಿದ ಕೇಸ್; ಮೂವರ ಬಂಧನ

04:48 PM Jul 24, 2023 | Team Udayavani |

ಭೋಪಾಲ್: ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ 34 ವರ್ಷದ ವ್ಯಕ್ತಿಯನ್ನು ಅರೆಬೆತ್ತಲೆ ಮಾಡಿ, ಗುದ್ದಿ, ಬಾಯಿಯಿಂದ ಶೂ ಎತ್ತಿಕೊಂಡು ಹೋಗುವಂತೆ ಬಲವಂತಪಡಿಸಿದ ವೈರಲ್ ವಿಡಿಯೋ ಆಧರಿಸಿ ಪ್ರಮುಖ ಆರೋಪಿ ಮತ್ತು ಆತನ ಇಬ್ಬರು ಸಹಚರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

Advertisement

ಎರಡು ವರ್ಷಗಳಿಗಿಂತಲೂ ಹಳೆಯದಾದ ವಿಡಿಯೋ ಕ್ಲಿಪ್‌ನಲ್ಲಿ ಸಂತ್ರಸ್ತ ತನ್ನ ಕೈಗಳನ್ನು ಬೆನ್ನಿನ ಹಿಂದೆ ಕಟ್ಟಿಕೊಂಡಿದ್ದು ಬಿಟ್ಟು ಬಿಡುವಂತೆ ಅಂಗಲಾಚುತ್ತಿರುವುದು ಕಂಡುಬರುತ್ತದೆ. ಆಸ್ತಿ ವಿವಾದವೇ ಅಪರಾಧದ ಹಿಂದೆ ಪ್ರಾಥಮಿಕ ಪ್ರಚೋದಕವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ವಿಡಿಯೋ ಪರಿಶೀಲಿಸಿದ ಮೇಲೆ, ನಾವು ಪ್ರಮುಖ ಆರೋಪಿ ಗೊಂಡ್ ಬುಡಕಟ್ಟಿನ ಜವಾಹರ್ ಸಿಂಗ್ (55) ಮತ್ತು ಆತನ ಇಬ್ಬರು ಸಹಚರರನ್ನು ಬಂಧಿಸಿದ್ದೇವೆ” ಎಂದು ರೇವಾ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.

ಕಳೆದ ವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ವಿಡಿಯೋವನ್ನು ಮೇ 2021 ರಲ್ಲಿ ರೇವಾದಲ್ಲಿನ ಹನುಮ್ನಾ ಪೊಲೀಸ್ ಠಾಣೆ ವ್ಯಾಪ್ತಿಯ ಪಿಪ್ರಾಹಿ ಗ್ರಾಮದಲ್ಲಿ ರೆಕಾರ್ಡ್ ಮಾಡಲಾಗಿದೆ ಎಂದು ಅವರು ಹೇಳಿದರು. ಪ್ರಮುಖ ಆರೋಪಿ ಬುಡಕಟ್ಟು ಜನಾಂಗದವರಾಗಿದ್ದರೆ, ಸಂತ್ರಸ್ತ ಮೇಲ್ಜಾತಿಯವ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next