ಮಧ್ಯ ಪ್ರದೇಶ : ಭಾರಿ ಮಳೆಯ ಕಾರಣದಿಂದಾಗಿ ಉತ್ತರ ಮಧ್ಯ ಪ್ರದೇಶದ 1200 ಕ್ಕೂ ಹೆಚ್ಚು ಗ್ರಾಮೀಣ ಪ್ರದೇಶಗಳಲ್ಲಿ ಸಂಪೂರ್ಣ ತತ್ತರಸಿ ಹೋಗಿವೆ.
ರಾಜ್ಯ ಹಾಗೂ ಕೇಂದ್ರದ ವಿಪತ್ತು ನಿರ್ವಹಣಾ ತಂಡ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ನೆರೆಯ ಕಾರಣದಿಂದಾಗಿ ಅಪಾಯದಂಚಿನಲ್ಲಿರುವ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ ಎಂದು ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಚೌಹಾಣ್, ಉತ್ತರ ಮಧ್ಯಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಭೀಕರವಾಗಿದೆ. ಶಿವಪುರಿ, ಶಿಯೋಪುರ್, ಡಾಟಿಯಾ, ಗ್ವಾಲಿಯರ್, ಗುಣ, ಭಿಂದ್ ಮತ್ತು ಮೊರೆನಾ ಜಿಲ್ಲೆಗಳ 1,225 ಹಳ್ಳಿಗಳು ಬಾಧಿತವಾಗಿವೆ. ಎಸ್ ಡಿ ಆರ್ ಎಪ್, ಎನ್ ಡಿ ಆರ್ ಎಫ್ ಮತ್ತು ಬಿ ಎಸ್ ಎಫ್ ತಂಡಗಳು 240 ಗ್ರಾಮಗಳಿಂದ ಸುಮಾರು 5,950 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಬಿ.ವೈ ವಿಜಯೇಂದ್ರಗೆ ಇಲ್ಲ ಸಚಿವ ಪಟ್ಟ, ಯಡಿಯೂರಪ್ಪ ವಿರುದ್ಧ ಗುಡುಗಿದವರಿಗೆ ಶಾಕ್!
ಸದ್ಯ ನೆರೆ ಪೀಡಿತ ಪ್ರದೇಶಗಳಾದ, ಗ್ವಾಲಿಯರ್ ನಲ್ಲಿ ಎನ್ ಡಿಆರ್ ಎಫ್ ನ ಮೂರು ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ ಮತ್ತು ಎರಡು ತಂಡಗಳು ಶಿವಪುರಿಯಲ್ಲಿವೆ. ಭಾರತೀಯ ಸೇನೆಯ ನಾಲ್ಕುತಂಡಗಳು ಶಿವಪುರಿ, ಗ್ವಾಲಿಯರ್, ಡಾಟಿಯಾ ಮತ್ತು ಶಿಯೋಪುರದಲ್ಲಿ ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ. ವಾಯುಪಡೆಯ ಹೆಲಿಕಾಫ್ಟರ್ ಗಳು ಸಹ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮಳೆಯ ಪ್ರಮಾನ ಈಗ ಕಡಿಮೆಯಾಗುತ್ತಿದೆಯಾದರೂ, ಮಳೆಯು ಈಗ ರಾಜ್ಯದ ಉತ್ತರ ದಿಕ್ಕಿಗೆ ತಿರುಗುತ್ತಿದೆ. ಮತ್ತೆ ಮಳೆಯ ಭೀಕರತೆ ಸೃಷ್ಟಿಯಾಗುವುದಿಲ್ಲವೆಂಬುವುದು ಖಾತ್ರಿಯಿದೆ. ರಕ್ಷಣಾ ಪಡೆಗಳನ್ನು ಭದ್ರ ಪಡಿಸುವಲ್ಲಿ ರಾಜ್ಯ ಸರ್ಕಾರ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ. ನೆರೆಯ ಕಾರಣದಿಂದಾಗಿ ಅವಾಂತರ ಸೃಷ್ಟಿಯಾದ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : BREAKING : ಈ ಶಾಸಕರಿಗೆ ಸಚಿವ ಸ್ಥಾನ ಖಚಿತ : ಖುದ್ದು ಸಿಎಂ ಬೊಮ್ಮಾಯಿ ದೂರವಾಣಿ ಕರೆ