Advertisement

35 ರನ್ ಗೆ ಆಲ್ ಔಟ್ ಆದ ಮಧ್ಯಪ್ರದೇಶ 

11:02 AM Jan 10, 2019 | Team Udayavani |

ಇಂದೋರ್: ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶ ನಡುವಿನ ರಣಜಿ ಪಂದ್ಯ ಹಲವು ರೊಮಾಂಚನಗಳಿಗೆ ಕಾರಣವಾಗಿದೆ. ದ್ವಿತೀಯ ಇನ್ನಿಂಗ್ಸ್ ನಲ್ಲಿ ದಿಢಿರ್ ಕುಸಿತ ಕಂಡ ಮಧ್ಯಪ್ರದೇಶ ಕೇವಲ35  ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿದೆ. 

Advertisement

ಮೊದಲು ಬ್ಯಾಟಿಂಗ್ ಮಾಡಿದ್ದ ಆಂಧ್ರಪ್ರದೇಶ 132 ರನ್ ಗಳಿಗೆ ಆಲ್ ಔಟ್ ಆಗಿತ್ತು. ಇದಕ್ಕುತ್ತರಿಸಿದ ಮಧ್ಯಪ್ರದೇಶ ತಂಡ ಕೇವಲ 91 ರನ್ ಗಳಿಸಲಷ್ಟೇ ಶಕ್ತವಾಗಿತ್ತು. 


ದ್ವಿತೀಯ ಇನ್ನಿಂಗ್ಸ್ ನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಕರಣ್ ಶಿಂದೆ ಶತಕದ ಸಾಹಸದಿಂದ ಆಂಧ್ರಪ್ರದೇಶ ತಂಡ 301 ರನ್ ಪೇರಿಸಿತು. ಗೆಲುವಿಗಾಗಿ ದೊಡ್ಡ ಮೊತ್ತದ ಗುರಿ ಪಡೆದ ಮಧ್ಯ ಪ್ರದೇಶ 35 ರನ್ ಗಳಿಗೆ ಮೊದಲ 4 ವಿಕೆಟ್ ಕಳೆದುಕೊಂಡಿತು. ನಂತರ ಸ್ಕೊರರ್ ಗಳಿಗೆ ಯಾವುದೇ ಕಷ್ಟ ನೀಡಲೇ ಇಲ್ಲ. 16.5 ಓವರ್ ಮುಗಿಯುವಷ್ಟರಲ್ಲಿ ಆಂಧ್ರಪ್ರದೇಶ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಾಗಿತ್ತು. ಆದರೆ ತಂಡದ ಮೊತ್ತ 35 ರ ಮೇಲೆ ಹೋಗಲೇ ಇಲ್ಲ. 

ಆರ್ಯಮನ್ ಬಿರ್ಲಾ, ಯಶ್ ದುಬೇ ಮಾತ್ರ ಎರಡಂಕೆ ಮೊತ್ತ ದಾಖಲಿಸಿದವರು. ಕೊನೆಯ ಆರು ಬ್ಯಾಟ್ಸಮನ್ ಗಳದ್ದು ಶೂನ್ಯ ಸಾಧನೆ. ಅಂದ್ರ ಪರ ಶಶಿಕಾಂತ್ 6 ವಿಕೆಟ್ ಪಡೆದು ಮಿಂಚಿದರು. 

ಮಧ್ಯಪ್ರದೇಶ ಸೋಲಿನ ಪರಿಣಾಮ ಬರೋಡಾ ವಿರುದ್ಧ ಸೋಲು ಕಂಡಿದ್ದರೂ ಕರ್ನಾಟಕ ತಂಡ ರಣಜಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next