Advertisement

ರಾಮನವಮಿ ಗಲಭೆ ಪ್ರಕರಣ: 2.9 ಲ.ರೂ. ಪಾವತಿಸಲು 12ವರ್ಷದ ಬಾಲಕನಿಗೆ ನೋಟಿಸ್! ಕಂಗಾಲಾದ ಕುಟುಂಬ

09:43 AM Oct 19, 2022 | Team Udayavani |

ಭೋಪಾಲ್: ರಾಮನವಮಿ ಸಂದರ್ಭದಲ್ಲಿ ನಡೆದ ಗಲಭೆಯಲ್ಲಿ ಆದ ಹಾನಿಗೆ ಪರಿಹಾರ ನೀಡುವ ಸಲುವಾಗಿ 12 ವರ್ಷದ ಬಾಲಕನೊಬ್ಬನಿಗೆ 2.9 ಲಕ್ಷ ರೂಪಾಯಿ ಪಾವತಿಸುವಂತೆ ನೋಟಿಸ್ ನೀಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

Advertisement

ಎಪ್ರಿಲ್ 10 ರಂದು ಮಧ್ಯಪ್ರದೇಶದ ಖರ್ಗೋನ್‍ನಲ್ಲಿ ನಡೆದ ರಾಮನವಮಿ ಮೆರವಣಿಗೆ ವೇಳೆ ಗುಂಪು ಘರ್ಷಣೆ ನಡೆದು ಹಲ್ಲೆ ನಡೆಸಲಾಗಿತ್ತು ಅಲ್ಲದೆ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾಳುಮಾಡಲಾಗಿತ್ತು ಈ ಎಲ್ಲ ವಿಚಾರಗಳಿಗೆ ಸಂಬಂಧಿಸಿ ಬಾಲಕ ಹಾಗೂ ಆತನ ಕುಟುಂಬಕ್ಕೆ ನೋಟಿಸ್ ಜಾರಿ ಮಾಡಿದೆ, ನೋಟಿಸ್ ಬಂದ ಬಳಿಕ ಬಡ ಕುಟುಂಬದ ಸದಸ್ಯರು ದಿಕ್ಕು ತೋಚದೆ ಆತಂಕಕ್ಕೆ ಒಳಗಾಗಿದ್ದಾರೆ, ಅಲ್ಲದೆ ಯಾವಾಗ ನನ್ನನ್ನು ಪೊಲೀಸರು ಬಂದಿಸುತ್ತಾರೋ ಎಂಬ ಭಯದಲ್ಲಿ ಬಾಲಕ ಕಂಗಾಲಾಗಿದ್ದಾನೆ.

ಬಾಲಕನ ತಂದೆಗೂ ನಷ್ಟ ಪರಿಹಾರಕ್ಕೆ 4.8 ಲಕ್ಷ ರೂಪಾಯಿ ಪಾವತಿಸುವಂತೆ ರಾಜ್ಯ ಕ್ಲೇಮ್ ನ್ಯಾಯಾಧಿಕರಣ ನೋಟಿಸ್ ಜಾರಿಗೊಳಿಸಿದೆ.
ಅಲ್ಲದೆ ಈ ಬಾಲಕನ ತಂದೆ ಕೂಲಿ ಕೆಲಸ ಮಾಡಿಕೊಂಡಿದ್ದು ಜೀವನ ನಡೆಸಲು ಬೇರೆ ಯಾವುದೇ ಆಧಾರವಿಲ್ಲ ಎಂದು ತಂದೆ ಕಾಲೂ ಖಾನ್‍ ಅಲವತ್ತುಕೊಂಡಿದ್ದಾರೆ.

ಬಾಲಕನ ತಾಯಿ ಹೇಳಿಕೆಯಂತೆ ತನ್ನ ಮಗ ಅಂದು ಮನೆಯಲ್ಲೇ ಇದ್ದ ನಾವೆಲ್ಲರೂ ಮನೆಯಲ್ಲಿ ಮಲಗಿದ್ದೆವು ನಾವೇನು ತಪ್ಪು ಮಾಡಲಿಲ್ಲ ಎಂದು ಹೇಳಿದ್ದಾರೆ, ಅದೂ ಅಲ್ಲದೆ ಇಷ್ಟೊಂದು ದೊಡ್ಡ ಪ್ರಮಾಣದ ಮೊತ್ತ ಪಾವತಿಸುವ ಶಕ್ತಿ ನಮ್ಮಲಿಲ್ಲ ನಮ್ಮದು ಬಡ ಕುಟುಂಬ ಎಂದಿದ್ದಾರೆ.

ಮಧ್ಯಪ್ರದೇಶ ಸರಕಾರ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ತಡೆ ಮತ್ತು ವಸೂಲಾತಿ ತಡೆ ಕಾಯ್ದೆಯನ್ನು ಕಳೆದ ವರ್ಷದ ಡಿಸೆಂಬರ್ ನಲ್ಲಿ ಜಾರಿಗೆತಂದಿತ್ತು. ಬಿಜೆಪಿ ಆಡಳಿತದ ರಾಜ್ಯವಾದ ಉತ್ತರ ಪ್ರದೇಶವನ್ನು ಅನುಸರಿಸಿ ಮಧ್ಯಪ್ರದೇಶ ಈ ಕಾಯ್ದೆ ಜಾರಿಗೆ ತಂದಿತ್ತು. ಯಾವುದೇ ಮುಷ್ಕರಗಳು, ಪ್ರತಿಭಟನೆಗಳು ಅಥವಾ ಗುಂಪು ಘರ್ಷಣೆ ವೇಳೆ ಸಾರ್ವಜನಿಕ ಆಸ್ತಿ ಪಾಸ್ತಿಗೆ ಉದ್ದೇಶಪೂರ್ವಕವಾಗಿ ಹಾನಿ ಮಾಡಿದ್ದು ಸಾಬೀತಾದಲ್ಲಿ ಪರಿಹಾರ ವಸೂಲಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ ಹಾಗಾಗಿ ರಾಮನವಮಿ ಸಂದರ್ಭ ನಡೆದ ಗಲಭೆ ಪ್ರಕರಣದಲ್ಲಿ ಉಂಟಾದ ಹಾನಿಗೆ ಪರಿಹಾರ ನೀಡುವಂತೆ ಸಾರ್ವಜನಿಕರು ದೂರು ನೀಡಿದ್ದರು ಎನ್ನಲಾಗಿದೆ ಅದರಲ್ಲಿ ಕೆಲವೊಂದು ದೂರುಗಳನ್ನು ಅಂಗೀಕರಿಸಿ ಪರಿಹಾರಕ್ಕೆ ನೋಟಿಸ್ ನೀಡಿದೆ.

Advertisement

ಇದನ್ನೂ ಓದಿ : ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: ಖರ್ಗೆ v/s ತರೂರ್, ಯಾರಿಗೆ ಒಲಿಯಲಿದೆ ಅಧ್ಯಕ್ಷ ಪಟ್ಟ ?

Advertisement

Udayavani is now on Telegram. Click here to join our channel and stay updated with the latest news.

Next