Advertisement

ಕಾಂಗ್ರೆಸ್‌ ರೋಡ್‌ ಶೋ ವೇಳೆ ಬಲೂನ್‌ ಸ್ಫೋಟ;ಬೆಚ್ಚಿ ಬಿದ್ದ ರಾಹುಲ್‌

03:10 PM Oct 07, 2018 | |

ಜಬಲ್‌ಪುರ್‌: ವಿಧಾನಸಭಾ ಚುನಾವಣೆ ಕಾವು ಏರಿರುವ ಮಧ್ಯಪ್ರದೇಶದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಸನಿಹದಲ್ಲೆ ಬಲೂನುಗಳ ಗೊಂಚಲಿಗೆ ಬೆಂಕಿ ಹೊತ್ತಿಕೊಂಡು ಭಾರೀ ಸ್ಫೋಟ ನಡೆದಿದೆ. ಅದೃಷ್ಟವಷಾತ್‌ ಯಾರೊಬ್ಬರಿಗೂ ಗಾಯಗಳಾಗಿಲ್ಲ. 

Advertisement

ಶನಿವಾರ ರಾಹುಲ್‌ ಅವರು ತೆರದ ವಾಹನಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಕೈ ಕಾರ್ಯಕರ್ತರು ಬಲೂನ್‌ಗಳ ಗೊಂಚಲನ್ನು ಹಿಡಿದಿದ್ದರು. ಈ ವೇಳೆ ಆರತಿ ಬೆಳಗಲೆಂದು ಅಭಿಮಾನಿಯೊಬ್ಬರು ಬಂದಿದ್ದು ಬೆಂಕಿ ಬಲೂನ್‌ ಗೊಂಚಲಿಗೆ ತಗುಲಿ ಏಕಾಏಕಿ ಸ್ಫೋಟಗೊಂಡಿದೆ. 

ಒಮ್ಮೆಲೆ ಸ್ಫೋಟಗೊಂಡು ಕಾಣಿಸಿಕೊಂಡ ಬೆಂಕಿ ನೋಡಿ ರಾಹುಲ್‌ ಬೆಚ್ಚಿ ಬಿದ್ದರು. ಬಳಿಕ ಬಲೂನ್‌ ಸ್ಫೋಟ ಎಂದು ತಿಳಿದ ಬಳಿಕ ನಿರಾಳರಾದರು. 

ರಾಹುಲ್‌ ರೋಡ್‌ ಶೋ ವೇಳೆ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next