Advertisement

ಬಾಲ್ಯವಿವಾಹ ನಿಷೇಧವೇ ಲವ್‌ ಜೆಹಾದ್‌ ಗೆ ಕಾರಣ

08:50 AM May 07, 2018 | Team Udayavani |

ಭೋಪಾಲ್‌ : ಮದುವೆಯಾಗಬೇಕೆಂದರೆ ಹೆಣ್ಣುಮಕ್ಕಳಿಗೆ 18 ವರ್ಷ ತುಂಬಬೇಕು ಎಂಬುದೇ ಒಂದು ‘ರೋಗ’ವಾಗಿದ್ದು, ಲವ್‌ ಜೆಹಾದ್‌ ಹಾಗೂ ಓಡಿಹೋಗುವಂಥ ಪ್ರಕರಣಗಳಿಗೆ ಇದುವೇ ಕಾರಣ ಎಂದು ಮಧ್ಯಪ್ರದೇಶದ ಬಿಜೆಪಿ ಶಾಸಕ ಗೋಪಾಲ್‌ ಪಾರ್ಮರ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಕೇರಳದ ಹದಿಯಾ ಪ್ರಕರಣದ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿರುವ ಗೋಪಾಲ್‌, ಹಿಂದೆಲ್ಲ ಕುಟುಂಬದಲ್ಲಿನ ಹಿರಿಯರು ತಮ್ಮ ಮಕ್ಕಳಿಗೆ ಬಾಲ್ಯದಲ್ಲೇ ವಿವಾಹ ನಿಶ್ಚಯ ಮಾಡುತ್ತಿದ್ದರು. ಹಾಗಾಗಿ, ಅಂಥ ಸಂಬಂಧಗಳು ದೀರ್ಘ‌ಕಾಲ ಉಳಿಯುತ್ತಿತ್ತು. ಯಾವಾಗ ಸರಕಾರ ವಿವಾಹಕ್ಕೆ 18 ವರ್ಷ ತುಂಬಬೇಕು ಎಂಬ ರೋಗವನ್ನು ಜಾರಿ ಮಾಡಿತೋ, ಅಂದಿನಿಂದ 18 ವರ್ಷ ತುಂಬಿದ ಹೆಣ್ಣುಮಕ್ಕಳು ಓಡಿ ಹೋಗಲು ಪ್ರಾರಂಭಿಸಿದರು ಎಂದು ಹೇಳಿದ್ದಾರೆ. ನಮ್ಮ ಹೆಣ್ಣುಮಕ್ಕಳು ಕೆಲವು ಕ್ರಿಮಿನಲ್‌ಗ‌ಳ ಮಾತಿಗೆ ಮರುಳಾಗಿ ಅವರ ಬಲೆಗೆ ಬೀಳುತ್ತಾರೆ. ಅದನ್ನು ತಪ್ಪಿಸಬೇಕೆಂದರೆ, ಹೆಣ್ಣುಮಕ್ಕಳ ಮೇಲೆ ಒಂದು ಕಣ್ಣಿಟ್ಟಿರಿ. ಲವ್‌ ಜೆಹಾದ್‌ ನ ಬಲೆಗೆ ಬೀಳದಂತೆ ನೋಡಿಕೊಳ್ಳಿ ಎಂದು ಹೆಣ್ಣು ಹೆತ್ತವರಲ್ಲಿ ಕೇಳಿಕೊಳ್ಳುತ್ತೇನೆ ಎಂದೂ ಶಾಸಕ ಪಾರ್ಮರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next