ಕೋಟ: ಮಧುವನ ರೈಲ್ವೇ ಮೇಲ್ಸೇತುವೆಯಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಹೊಂಡಗಳು ಸೃಷ್ಟಿಯಾಗಿ ನೀರು ನಿಂತು ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಸಂಚರಿಸಲು ಸಮಸ್ಯೆಯಾಗುತಿತ್ತು.
ಈ ಬಾರಿ ಕೂಡ ಇದೇ ಸಮಸ್ಯೆ ಮರುಕಳಿಸಿ ಸಾರ್ವಜನಿಕರು ಸಂಕಷ್ಟಪಡುತ್ತಿರುವ ಕುರಿತು ಉದಯವಾಣಿ ಜು.28ರಂದು ವರದಿ ಪ್ರಕಟಿಸಿತ್ತು.
ಇದೀಗ ಎಚ್ಚೆತ್ತ ಸಂಬಂಧಪಟ್ಟ ಇಲಾಖೆ ಸೇತುವೆಯ ದುರಸ್ತಿಗೆ ಮುಂದಾಗಿದೆ. ಸೋಮವಾರ ಕಾಮಗಾರಿ ಆರಂಭಗೊಂಡಿದ್ದು ಸೇತುವೆ ಒಂದು ಪದರವನ್ನು ತೆಗೆದು ಸಂಪೂರ್ಣವಾಗಿ ಕಾಂಕ್ರೆಟ್ ಮಾಡಲಾಗುತ್ತದೆ ಹಾಗೂ ನೀರು ಹರಿದು ಹೋಗಲು, ಸೇತುವೆಯ ಮೇಲೆ ನೀರು ನಿಲ್ಲದಂತೆ ವ್ಯವಸ್ಥೆ ಮಾಡಲಾಗುತ್ತಿದೆ.
ಪತ್ರಿಕೆಗೆ, ಇಲಾಖೆಗೆ ಕೃತಜ್ಞತೆ
ಹಲವು ವರ್ಷಗಳಿಂದ ಪರಿಹಾರವಾಗದ ಈ ಸಮಸ್ಯೆಯ ಕುರಿತು ಸಾರ್ವಜನಿಕ ಕಳಕಳಿಯ ವರದಿ ಪ್ರಕಟಿಸಿದ ಉದಯವಾಣಿ ಪತ್ರಿಕೆಗೆ ಹಾಗೂ ಶೀಘ್ರ ಕ್ರಮಕ್ಕೆ ಮುಂದಾದ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳೀಯರು ಕೃತಜ್ಞತೆ ಸಲ್ಲಿಸಿದ್ದಾರೆ.