Advertisement

ಕಾಂಗ್ರೆಸ್‌ ವಿರೋಧ ಭೀತಿ: ಚಿತ್ರದ ಪ್ರಚಾರವೇ ರದ್ದು!

04:40 AM Jul 17, 2017 | Team Udayavani |

ಹೊಸದಿಲ್ಲಿ : ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆಗೆ ಹೆದರಿ ‘ಇಂದು ಸರ್ಕಾರ್‌’ ಸಿನಿಮಾ ಪ್ರಚಾರ ಕಾರ್ಯಕ್ರಮವನ್ನೇ ನಿರ್ಮಾಪಕ ಮಧುರ್‌ ಭಂಡಾರ್ಕರ್‌ ರದ್ದುಗೊಳಿಸಿದ್ದಾರೆ. ಆಕ್ರೋಶಗೊಂಡಿರುವ ಭಂಡಾರ್ಕರ್‌ ಅವರು ರಾಹುಲ್‌ರನ್ನು ಉದ್ದೇಶಿಸಿ ಟ್ವೀಟ್‌ ಮಾಡಿದ್ದು, ‘ಎರಡು ಕಡೆಗಳಲ್ಲಿ ಚಿತ್ರದ ಪ್ರಚಾರಕ್ಕೆ ಅಡ್ಡಿಯಾಗಿದೆ. ನೀವು ಈ ಗೂಂಡಾಗಿರಿ ಒಪ್ಪುತ್ತೀರಾ? ನನಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲವೇ?’ ಎಂದು ಪ್ರಶ್ನಿಸಿದ್ದಾರೆ. ಚಿತ್ರದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ಅವರ ಪುತ್ರ ಸಂಜಯ್‌ ಗಾಂಧಿ ಅವರನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂಬ ಆರೋಪವಿದೆ. ನಾಗ್ಪುರದಲ್ಲಿ ನಡೆಯಬೇಕಿದ್ದ ಚಿತ್ರದ ಪ್ರಚಾರ ಕುರಿತ ಮಾಧ್ಯಮ ಗೋಷ್ಠಿ ಹೊರಗೆ ಕಾಂಗ್ರೆಸ್‌ ಕಾರ್ಯಕರ್ತರು ಜಮಾಯಿಸಿ, ಘೋಷಣೆ ಕೂಗಿದ್ದಾರೆ. ಪುಣೆಯಲ್ಲೂ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಕಾಂಗ್ರೆಸ್‌ ವಕ್ತಾರ ಅತುಲ್‌ ಲೋಂಧೆ, ‘ಇಂದಿರಾರನ್ನು ಅವಹೇಳನ ಮಾಡುವುದನ್ನು ಭಾರತೀಯರು ಒಪ್ಪುವುದಿಲ್ಲ. ಈ ಚಿತ್ರದಲ್ಲಿ ಅಂಥದ್ದೇನೂ ಇಲ್ಲ ಎಂದಾದರೆ ನಿರ್ಮಾಪಕರು ಗಾಂಧಿ ಕುಟುಂಬಕ್ಕೆ ಚಿತ್ರ ತೋರಿಸಿ ಒಪ್ಪಿಗೆ ಪಡೆಯಲಿ’ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next