ಮಧುಗಿರಿ : ಬಿಸಿಯೂಟ ತಿಂದ ವಿದ್ಯಾರ್ಥಿಗಳಿಗೆ ಹೊಟ್ಟೆನೋವು ಕಾಣಿಸಿಕೊಂಡು ವಾಂತಿಯಾಗಿ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಾಲ್ಲೂಕಿನ ಹೊನ್ನಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಮಧ್ಯಾಹ್ನದ ಊಟದ ಸಮಯದಲ್ಲಿ ತಟ್ಟೆಯಲ್ಲಿದ್ದ ಸಾರಿನಲ್ಲಿ ಹುಳಗಳು ಕಂಡುಬಂದಿದೆ. ಇದನ್ನು ವಿಧ್ಯಾರ್ಥಿಗಳು ಶಿಕ್ಷಕರಿಗೆ ತೋರಿಸಿದ್ದಾರೆ. ಅದಾಗಲೆ ಊಟ ಮಾಡಿದ್ದವರಿಗೆ ಹೊಟ್ಟೆನೋವು, ವಾಂತಿಯಾಗಿದೆ.
ತಕ್ಷಣವೇ ನೆರಳೆಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ವೈದ್ಯರು ಬಂದು ಚಿಕಿತ್ಸೆ ನೀಡಿದ್ದಾರೆ. ಬಳಿಕ ಆಂಬ್ಯುಲೆನ್ಸ್ ಮೂಲಕ ಹೆಚ್ಚಿನ ಚಿಕಿತ್ಸೆಗಾಗಿ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ಸುಮಾರು ಹದಿನೈದು ವಿದ್ಯಾರ್ಥಿಗಳನ್ನು ದಾಖಲು ಮಾಡಲಾಗಿದೆ .
ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾರೆ. ಸ್ಥಳಕ್ಕೆ ಡಿಡಿಪಿಐಎಂ. ರೇವಣಸಿದ್ದಪ್ಪ ,ಬಿಇಒ, ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ವಿ.ಹೆಚ್.ವೆಂಕಟೇಶಯ್ಯ,ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಾಲೆಯ ಶಿಕ್ಷಕರು ಮತ್ತು ಪೋಷಕರು ಇದ್ದರು.
ಇದನ್ನೂ ಓದಿ : ಹೇ ರಾಮ್ ಎಂಬುದು ಭಾರತೀಯ ಸಂಸ್ಕೃತಿ, ಜೈ ಶ್ರೀರಾಮ ಬಿಜೆಪಿ ಸಂಸ್ಕೃತಿ : ವಿ.ಎಸ್.ಉಗ್ರಪ್ಪ