Advertisement

ಮಧು ಬಂಗಾರಪ್ಪ ಆಸ್ತಿ ಮೌಲ್ಯ 61 ಕೋಟಿ

06:00 AM Oct 17, 2018 | Team Udayavani |

ಶಿವಮೊಗ್ಗ: ಜೆಡಿಎಸ್‌ ಅಭ್ಯರ್ಥಿ ಮಧು ಬಂಗಾರಪ್ಪ ಕುಟುಂಬ 61 ಕೋಟಿ ರೂ. ಮೌಲ್ಯದ ಚರ ಮತ್ತು ಸ್ಥಿರಾಸ್ತಿ ಹೊಂದಿದೆ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಇದ್ದ 67 ಕೋಟಿ ರೂ.ಮೌಲ್ಯದ ಆಸ್ತಿಯಲ್ಲಿ 6 ಕೋಟಿ ರೂ.ಮೌಲ್ಯದ ಆಸ್ತಿ ಕಡಿಮೆಯಾಗಿದೆ. ಇವರ ಕುಟುಂಬದ ಒಟ್ಟು ವಾರ್ಷಿಕ ಆದಾಯ 77.17 ಲಕ್ಷ ರೂ. ಮಧು ಮತ್ತು ಅವರ ಪತ್ನಿ ಅನಿತಾ ಅವರು 20.38 ಕೋಟಿ ರೂ.ಮೌಲ್ಯದ ಚರಾಸ್ತಿ, ಮಧು ಮತ್ತು ಅವರ ಪುತ್ರ ಸೂರ್ಯ ಅವರು 41.70 ಕೋಟಿ ರೂ.ಸ್ಥಿರಾಸ್ತಿ ಹೊಂದಿದ್ದಾರೆ. 63.60 ಲಕ್ಷ 
ರೂ.ಮೌಲ್ಯದ ಎರಡು ಕಾರುಗಳಿವೆ. ಸೊರಬ ತಾಲೂಕಿನ ತಲಗಡ್ಡೆಯಲ್ಲಿ 50 ಎಕರೆ, ಕೋಡಿಕೊಪ್ಪದಲ್ಲಿ 59 ಎಕರೆ, ಕುಬಟೂರಲ್ಲಿ 6 ಎಕರೆ, ಲಕ್ಕವಳ್ಳಿಯಲ್ಲಿ 35 ಎಕರೆ ಮತ್ತು ದೇವಸ್ಥಾನದ ಹಕ್ಕಲಲ್ಲಿ 2 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಈ ಎಲ್ಲ ಆಸ್ತಿಗಳು ಮಧು ಬಂಗಾರಪ್ಪ ಮತ್ತು ಅವರ ಪುತ್ರ ಸೂರ್ಯನ ಹೆಸರಲ್ಲಿವೆ. ಬೆಂಗಳೂರು ಕುಮಾರಪಾರ್ಕ್‌ನಲ್ಲಿ 6 ಕೋಟಿ ರೂ. ಮೌಲ್ಯದ
ನಿವೇಶನ, ಆರ್‌ಎಂವಿ ಎಕ್ಸ್‌ಟೆನನ್‌, ಶಿವಮೊಗ್ಗ ಚನ್ನಪ್ಪ ಬಡಾವಣೆ, ಸೊರಬ ತಾಲೂಕು ಕುಬಟೂರಲ್ಲಿ ಮನೆಗಳನ್ನು ಹೊಂದಿದ್ದಾರೆ.

Advertisement

ಆನಂದ ಕೋಟಿ ಒಡೆಯ, ಶ್ರೀಕಾಂತಟ್ರ್ಯಾಕ್ಟರ್‌ ಮಾಲೀಕ
ಜಮಖಂಡಿ: ಜಮಖಂಡಿ ಉಪ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಆನಂದ ನ್ಯಾಮಗೌಡ ಒಟ್ಟು 97,84,266 ರೂ. ಚರಾಸ್ತಿ ಮತ್ತು 4,26,40,000 ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಆನಂದ ಅವರ ಪತ್ನಿ ಕೀರ್ತಿ 10,10,000 ರೂ.ಚರಾಸ್ತಿ ಹೊಂದಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ಅವರ ಹೆಸರಿನಲ್ಲಿ 1.08 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ, 33.89 ಲಕ್ಷ ಚರಾಸ್ತಿ ಇದೆ. ಪತ್ನಿ ಶ್ರೀದೇವಿ ಹೆಸರಿನಲ್ಲಿ 3,72,636 ರೂ.ಮೊತ್ತದ ಚರಾಸ್ತಿ, ಪುತ್ರ ಸಚಿನ್‌ 41.03 ಲಕ್ಷ ಚರಾಸ್ತಿ, ಇನ್ನೋರ್ವ ಪುತ್ರ ಸಮೀರ 12.64 ಲಕ್ಷ ಮೊತ್ತದ ಚರಾಸ್ತಿ ಹೊಂದಿದ್ದಾರೆ. ಮತ್ತೂಬ್ಬ ಪುತ್ರ ಭರತ 29.42 ಲಕ್ಷ ಚರಾಸ್ತಿ ಹೊಂದಿದ್ದಾರೆ. ಶ್ರೀಕಾಂತ ಕುಲಕರ್ಣಿ ಹೆಸರಿನಲ್ಲಿ ಒಂದು ಟ್ರ್ಯಾಕ್ಟರ್‌ ಇದೆ.

Advertisement

Udayavani is now on Telegram. Click here to join our channel and stay updated with the latest news.

Next