Advertisement
ಕ್ಷೀರಭಾಗ್ಯ ಹಾಗೂ ಮಧ್ಯಾಹ್ನದ ಬಿಸಿಯೂಟ ಯೋಜನೆಗಳು ಯಶಸ್ವಿಯಾಗಿ ಸಾಗುತ್ತಿದ್ದು, ಇದರೊಂದಿಗೆ ಮೊಟ್ಟೆ, ಶೇಂಗಾ ಚಿಕ್ಕಿ, ಬಾಳೆಹಣ್ಣು ಕೂಡ ನೀಡಲಾಗುತ್ತಿದೆ. ವಿದ್ಯಾರ್ಥಿದೆಸೆ ಯಿಂದಲೇ ಪೌಷ್ಠಿಕಾಂಶವುಳ್ಳ ಆಹಾರ ನೀಡಬೇಕೆಂಬ ಕಾರಣದಿಂದ ರಾಗಿ ಮಾಲ್ಟ್ ಕೂಡ ಕೊಡಲು ನಿರ್ಧರಿಸಿದ್ದು, ಈಗಾಗಲೇ ಸರಕಾರೇತರ ಸಂಸ್ಥೆ (ಎನ್‌ಜಿಒ)ಯೊಂದು ಎರಡು ಜಿಲ್ಲೆಗಳಿಗೆ ಪ್ರಾಯೋಗಿಕವಾಗಿ ವಿತರಿಸಿ ಯಶಸ್ವಿಯಾಗಿದೆ. ಇದನ್ನು ಎಲ್ಲ ಜಿಲ್ಲೆಗಳಿಗೂ ವಿಸ್ತರಣೆ ಮಾಡಲು ಎನ್‌ಜಿಒ ಮುಂದೆ ಬಂದಿದ್ದು, ಮುಂದಿನ ತಿಂಗಳಿಂದಲೇ ಜಾರಿಗೆ ಬರಲಿದೆ ಎಂದು ಗುರುವಾರ ವಿಕಾಸಸೌಧದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಅವರು ಪ್ರಕಟಿಸಿದರು.
ಸರಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಿ ಮಕ್ಕಳನ್ನು ಆಕರ್ಷಿಸುವ ಸಲುವಾಗಿ ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್) ತೆರೆಯಲು ಉದ್ದೇಶಿಸಲಾಗಿದೆ. ಎರಡು ಗ್ರಾಮ ಪಂಚಾಯತ್‌ಗೆ ಒಂದರಂತೆ ಒಟ್ಟು 3 ಸಾವಿರ ಕೆಪಿಎಸ್‌ಗಳನ್ನು ಮುಂದಿನ 3 ವರ್ಷಗಳಲ್ಲಿ ಆರಂಭಿಸಲಾಗುತ್ತದೆ. ಇದಕ್ಕಾಗಿ 2,500 ಕೋಟಿ ರೂ. ಖರ್ಚಾಗುವ ಅಂದಾಜಿದ್ದು, 600 ಕೋಟಿ ರೂ.ಗಳಷ್ಟು ಸಿಎಸ್‌ಆರ್ ನಿಧಿ ಲಭ್ಯವಿದೆ. ಇನ್ನಷ್ಟು ಸಿಎಸ್‌ಆರ್ ನಿಧಿಯ ನೆರವಿಗಾಗಿ ಸಿಎಂ, ಡಿಸಿಎಂ ಜತೆ ಚರ್ಚಿಸಲಾಗುವುದು ಎಂದರು.