ಉಳ್ಳಾಲ: ಮಾಧವ ಮಂಗಲ ಗುರೂಜಿ ಸಮುದಾಯ ಭವನ ಲೋಕಾರ್ಪಣೆಯಿಂದ ಮೊಗವೀರ ಹಿ. ಪ್ರಾ. ಶಾಲಾ ಹಳೆ ವಿದ್ಯಾರ್ಥಿ ಸಂಘವನ್ನು ಸ್ಥಾಪಿಸಿದ ಹಿರಿಯರ ಕನಸು ನನಸಾಗಿದೆ, ಇದು ಮೊಗವೀರ ಸಮಾಜಕ್ಕೆ ಸಂದ ಗೌರವ ಮಾತ್ರವಲ್ಲ, ಇಡೀ ಉಳ್ಳಾಲದ ಕಿರೀಟಕ್ಕೆ ಒಂದು ಗರಿ ಎಂದು ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.
ಅವರು ಮೊಗವೀರ ಹಿರಿಯ ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿ ಸಂಘ, ಬ್ರದರ್ಸ್ ನ್ಪೋರ್ಟ್ಸ್ ಕ್ಲಬ್ ಹಾಗೂ ಬ್ರದರ್ಸ್ ಯುವಕ ಮಂಡಲ ಇದರ
ವಜ್ರಮಹೋತ್ಸವದ ಅಂಗವಾಗಿ ಉಳ್ಳಾಲ ಮೊಗವೀರ ಗ್ರಾಮ ಸಭೆಗೆ 1.5 ಕೋ. ರೂ. ವೆಚ್ಚದಲ್ಲಿ ನಿರ್ಮಿಸಿದ ಮೊಗವೀರ ಕುಲಗುರು ಪೂಜನೀಯ ಮಾಧವ ಮಂಗಲ ಗುರೂಜಿ ಸಮುದಾಯ ಭವನ ಲೋಕಾರ್ಪಣೆ, ಶ್ರೀ ವ್ಯಾಘ್ರ ಚಾಮುಂಡೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕರಿಗೆ ನೂತನ ವಸತಿಗೃಹ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೊಗವೀರ ಹಿ. ಪ್ರಾ. ಹಳೆ ವಿದ್ಯಾರ್ಥಿ ಸಂಘ ಮತ್ತು ಬ್ರದರ್ಸ್ ನ್ಪೋರ್ಟ್ಸ್ ಕ್ಲಬ್ ಯುವಕ ಸಂಘವನ್ನು ಸ್ಥಾಪಿಸಿ ಯುವ ಜನರನ್ನು ಸಂಘಟಿಸುವ ನಿಟ್ಟಿನಲ್ಲಿ ಹಿರಿಯರು ಪಟ್ಟ ಶ್ರಮಕ್ಕೆ ಇಂದಿನ ಯುವ ಪೀಳಿಗೆ ಸಹಕಾರ ನೀಡುತ್ತಿರುವುದು ಶ್ಲಾಘನೀಯ. ಸರಕಾರದ ಅನುದಾನದೊಂದಿಗೆ ದಾನಿಗಳ ಸಹಕಾರ ಪಡೆದು ಸಮುದಾಯ ಭವನ ಮಾಡುವುದು ಸಾಧನೆ ಎಂದು ಸಚಿವರು ಹೇಳಿದರು.
ಕರ್ಣಾಟಕ ಬ್ಯಾಂಕ್ ಪ್ರಧಾನ ಕಚೇರಿಯ ಮಹಾ ಪ್ರಬಂಧಕ ಬಿ. ಚಂದ್ರಶೇಖರ್ ರಾವ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ ಅಧ್ಯಕ್ಷತೆ ವಹಿಸಿದ್ದರು. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ವಿಮಲಾ ಜನಾರ್ದನ ಸುವರ್ಣ ಉಳ್ಳಾಲ, ಉಳ್ಳಾಲ ಫಿಶ್‌ಮೀಲ್ ಮಾಲಕರ ಸಂಘದ ಅಧ್ಯಕ್ಷ ಎಚ್.ಕೆ. ಅಬ್ದುಲ್ ಖಾದರ್, ಶ್ರೀಕ್ಷೇತ್ರ ಧ. ಗ್ರಾ. ಯೋ. ಮಂಗಳೂರು ತಾ. ಯೋಜನಾಧಿಕಾರಿ ಉಮ್ಮರಬ್ಬ, ಕರ್ನಾಟಕ ಪಸೀìನ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಮೋಹನ್ ಬೆಂಗ್ರೆ, ಶ್ರೀ ವ್ಯಾಘ್ರ ಮಂಗಳೂರಿನ ಲೋಕೇಶ್ ಉಳ್ಳಾಲ, ಮೊಗವೀರ ಸಂಘದ ಶಿಕ್ಷಣ ಸಂಸ್ಥೆಗಳ ಮಾಜಿ ಸಂಚಾಲಕ ಬಾಬು ಬಂಗೇರ, ಉಡುಪಿಯ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ವಿನಯ ಕರ್ಕೇರ ಮಲ್ಪೆ, ಮೊಗವೀರ ಹಿ. ಪ್ರಾ. ಶಾ. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಧುರಾಜ್ ಅಮೀನ್, ಶ್ರೀ ಮಾರುತಿ ಯುವಕ ಮಂಡಲದ ಅಧ್ಯಕ್ಷ ಕಿರಣ್ ಪುತ್ರನ್, ನಿತಿನ್‌ರಾಜ್ ಅಸೋಸಿಯೇಟ್ಸ್‌ನ ನಿತಿನ್‌ರಾಜ್, ಕಟ್ಟಡ ಗುತ್ತಿಗೆದಾರ ಪ್ರವೀಣ್ ಕುಲಾಲ್ ಕುಂಪಲ, ನಗರಸಭಾ ಧ್ಯಕ್ಷ ಹುಸೈನ್ ಕುಂಞಿಮೋನು, ವಜ್ರ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ದೇವದಾಸ್ ಪುತ್ರನ್, ಕೋಶಾಧಿಕಾರಿ ಸುನಿಲ್ ಪುತ್ರನ್ ಉಪಸ್ಥಿತರಿದ್ದರು.
ವಜ್ರಮಹೋತ್ಸವ ಸಮಿತಿಯ ಪ್ರಧಾನ ಸಂಚಾಲಕ ವಿಶ್ವನಾಥ ಬಂಗೇರ ಸ್ವಾಗತಿಸಿದರು. ವಜ್ರಮಹೋತ್ಸವ ಸಮಿತಿ ಅಧ್ಯಕ್ಷ ಮನೋಜ್ ಸಾಲ್ಯಾನ್ ಪ್ರಸ್ತಾವನೆಗೈದರು. ಕಾರ್ಯಾಧ್ಯಕ್ಷ ರಾಜೇಶ್ ಪುತ್ರನ್ ನಿರ್ವಹಿಸಿದರು. ನಿವೃತ್ತ ಶಿಕ್ಷಕ ಎಂ. ವಾಸುದೇವ ರಾವ್ ಸನ್ಮಾನಿತರ ವಿವರ ನೀಡಿದರು. ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಪುತ್ರನ್ ವಂದಿಸಿದರು.
ಸಮ್ಮಾನ
ಸಾಧಕರಾದ ಸಿಂಧೂರ ರಾಜ, ವರ್ಷಲ್ ವಿ. ಬಂಗೇರ, ಆಶೀಶ್ ಎ. ಸುವರ್ಣ, ವಿಭಾ ವಿ.ಬಿ. ಬಂಗೇರ, ವಿನಯ ಕುಮಾರಿ, ಅಬ್ದುಲ ರಹಮಾನ್, ಸೋಹನ್ ಎ. ಕೋಟ್ಯಾನ್, ನಿಶಾನ್ ಕುಮಾರ್ ಬೆಂಗ್ರೆ, ಶ್ರವಣ್ ಎಸ್. ಉಳ್ಳಾಲ ಅವರನ್ನು ಸಮ್ಮಾನಿಸಲಾಯಿತು.