Advertisement

ಮಡೆನೂರು ಮನು “ಕಾಮಿಡಿ ಕಿಲಾಡಿಗಳು ಸೀಸನ್ 2′ವಿನ್ನರ್

05:54 PM Jun 25, 2018 | |

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ “ಕಾಮಿಡಿ ಕಿಲಾಡಿಗಳು’ ಸೀಸನ್ 2 ರಿಯಾಲಿಟಿ ಶೋನ ವಿಜೇತರಾಗಿ ಹಾಸನದ ಮಡೆನೂರು ಮನು ಹೊರಹೊಮ್ಮಿದ್ದಾರೆ. ಇನ್ನು ರಾಮದುರ್ಗದ ಅಪ್ಪಣ್ಣ ಮತ್ತು ಮಂಗಳೂರಿನ ಸೂರಜ್ ಜೊತೆಯಾಗಿ ದ್ವಿತೀಯ ಸ್ಥಾನ ಪಡೆದಿದ್ದರೆ ಕುಂದಾಪುರದ ಸೂರ್ಯ ಮೂರನೇ ಸ್ಥಾನ ಪಡೆದಿದ್ದಾರೆ. 

Advertisement

ವಿಜೇತ ಮಡೆನೂರು ಮನು ಅವರಿಗೆ 5 ಲಕ್ಷ ಚೆಕ್ ಮತ್ತು ಟ್ರೋಫಿ ನೀಡಲಾಯಿತು. ದ್ವಿತೀಯ ಸ್ಥಾನ ಪಡೆದಿದ್ದ ಅಪ್ಪಣ್ಣ ಮತ್ತು ಸೂರಜ್ ಗೆ ತಲಾ ಎರಡು ಲಕ್ಷ ಬಹುಮಾನ ಮತ್ತು ಟ್ರೋಫಿ ಮತ್ತು ಮೂರನೇ ಸ್ಥಾನ ಪಡೆದ ಸೂರ್ಯಗೆ 1 ಲಕ್ಷ ಬಹುಮಾನ ಮತ್ತು ಟ್ರೋಫಿ ನೀಡಲಾಯಿತು. 

ಅಲ್ಲದೇ “ಕಾಮಿಡಿ ಕಿಲಾಡಿಗಳು’ ಸೀಸನ್ 2 ಫಿನಾಲೆ ಕಾರ್ಯಕ್ರಮ ವಿಜಯಪುರದಲ್ಲಿ ನಡೆದಿದ್ದು ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಆಗಮಿಸಿದ್ದರು. ವಿಜೇತರನ್ನು ತೀರ್ಪುಗಾರರ ಅಂಕಗಳು ಮತ್ತು ವೀಕ್ಷಕರ ಎಸ್ಎಂಎಸ್ ಆಧರಿಸಿ ಆಯ್ಕೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next