Advertisement

2022ರಲ್ಲಿ ಎಎಂಸಿಎ ನಿರ್ಮಾಣ ಶುರು

07:27 PM Nov 22, 2021 | Team Udayavani |

ನವದೆಹಲಿ: ಭಾರತವು ಸದ್ಯದಲ್ಲೇ ತನ್ನ ಮಹತ್ವಾಕಾಂಕ್ಷಿ, ಸ್ವದೇಶಿ ಸೇನಾ ವೈಮಾನಿಕ ಯೋಜನೆಯೊಂದನ್ನು ಸಾಕಾರಗೊಳಿಸುವತ್ತ ಹೆಜ್ಜೆಯಿಡಲಿದೆ.

Advertisement

ಸೂಪರ್‌ಕ್ರೂಸ್‌ ಸಾಮರ್ಥ್ಯ ಹಾಗೂ ಸುಧಾರಿತ ಫೀಚರ್‌ಗಳನ್ನು ಹೊಂದಿರುವ 5ನೇ ತಲೆಮಾರಿನ ಯುದ್ಧ ವಿಮಾನವನ್ನು ಅಭಿವೃದ್ಧಿಪಡಿಸುವ ಕಾರ್ಯ ಮುಂದಿನ ವರ್ಷವೇ ಆರಂಭವಾಗಲಿದೆ.

2022ರಲ್ಲಿ ಅಂಗೀಕಾರ?
ಅವಳಿ ಎಂಜಿನ್‌ ಹೊಂದಿರುವ ಸುಧಾರಿತ ಮಧ್ಯಮ ಯುದ್ಧ ವಿಮಾನ(ಎಎಂಸಿಎ) ನಿರ್ಮಾಣಕ್ಕೆ ಸಂಬಂಧಿಸಿದ ಪ್ರಸ್ತಾಪವನ್ನು ಮುಂದಿನ ವರ್ಷದ ಆರಂಭದಲ್ಲೇ ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿಯ ಅಂಗೀಕಾರಕ್ಕೆ ಕಳುಹಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಳೆಯ ಫ್ಲೀಟ್‌ಗೆ ಗುಡ್‌ಬೈ
ಸುಧಾರಿತ ಮಧ್ಯಮ ಯುದ್ಧ ವಿಮಾನಗಳನ್ನು ಅಭಿವೃದ್ಧಿಪಡಿಸುವ ಮೂಲಕ 6ನೇ ತಲೆಮಾರಿನ ಗುಣವಿಶೇಷಗಳನ್ನು ಹೊಂದಿರುವ 5ನೇ ತಲೆಮಾರಿನ ಸಮರ ವಿಮಾನಗಳನ್ನು ದೇಶೀಯವಾಗಿ ನಿರ್ಮಿಸುವ ಗುರಿ ಹಾಕಿಕೊಳ್ಳಲಾಗಿದೆ. ಈ ಯೋಜನೆ ಸಾಕಾರವಾದರೆ, ಡಸ್ಸಾಲ್ಟ್, ಜಾಗ್ವಾರ್‌, ಮಿರಾಜ್‌ 2000, ಮಿಗ್‌-27ನಂತಹ ಹಳೆಯ ವಿಮಾನಗಳನ್ನು ಸೇನೆಯ ಸೇವೆಯಿಂದ ಹೊರಗಿಡಲಾಗುತ್ತದೆ.

ಇದನ್ನೂ ಓದಿ:ತೀವ್ರ ವಿರೋಧಕ್ಕೆ ಮಣಿದ ಆಂಧ್ರಪ್ರದೇಶ ಸಿಎಂ; ವಿವಾದಿತ 3 ರಾಜಧಾನಿಗಳ ಮಸೂದೆ ವಾಪಸ್

Advertisement

ಪ್ರಸ್ತುತ ಜಗತ್ತಿನಲ್ಲಿರುವ 5ನೇ ತಲೆಮಾರಿನ ಜೆಟ್‌ಗಳು
– ಅಮೆರಿಕದ ಎಫ್/ಎ-22 ರಾಪ್ಟರ್‌ ಮತ್ತು ಎಫ್-35 ಲೈಟ್ನಿಂಗ್‌-2 ಜಾಯಿಂಟ್‌ ಸ್ಟ್ರೈಕ್‌ ಫೈಟರ್‌
– ಚೀನಾದ ಚೆಂಗ್ಡು ಜೆ-20
– ರಷ್ಯಾದ ಸುಖೋಯ್‌-57

– ಎಎಂಸಿಎ ನಿರೀಕ್ಷಿತ ತೂಕ- 25 ಟನ್‌
– ಅಂದಾಜು ನಿರ್ಮಾಣ ವೆಚ್ಚ- 15,000 ಕೋಟಿ ರೂ.
– ಮೊದಲ ಮಾದರಿ ವಿಮಾನ ನಿರ್ಮಾಣ ಯಾವಾಗ ಪೂರ್ಣ?- 2025-26
– ಮಾರ್ಕ್‌-1 ಜೆಟ್‌ಗಳ ಉತ್ಪಾದನೆ ಆರಂಭ- 2030-31
– ವೈಶಿಷ್ಟ್ಯವೇನು? – ಸರ್ಪಂಟೈನ್‌ ಏರ್‌ ಇಂಟೇಕ್‌, ಸ್ಮಾರ್ಟ್‌ ಶಸ್ತ್ರಾಸ್ತ್ರಗಳ ಅಳವಡಿಕೆಗೆ ಅವಕಾಶ
– ಯಾರಿಂದ ನಿರ್ಮಾಣ? – ಡಿಆರ್‌ಡಿಒ ಮತ್ತು ಏರೋನಾಟಿಕಲ್‌ ಡೆವಲಪ್‌ಮೆಂಟ್‌ ಏಜೆನ್ಸಿ.

Advertisement

Udayavani is now on Telegram. Click here to join our channel and stay updated with the latest news.

Next