ಬೆಂಗಳೂರು: ಲಂಡನ್ ಮೂಲದ, ಮೊಬೈಲ್ ಫೋನ್ ತಯಾರಿಕಾ ಕಂಪೆನಿ ನಥಿಂಗ್ ತನ್ನ ಮುಂಬರುವ ಸ್ಮಾರ್ಟ್ ಫೋನ್ ‘ಫೋನ್ (2)’ ಅನ್ನು ಭಾರತದಲ್ಲೇ ತಯಾರಿಸಲಾಗುವುದು ಎಂದು ಘೋಷಿಸಿದೆ.
ನಥಿಂಗ್ ಇಂಡಿಯಾದ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮನು ಶರ್ಮಾ ಈ ವಿಷಯ ಪ್ರಕಟಿಸಿದ್ದು, ನಥಿಂಗ್ ಫೋನ್ ಗಳು ವಿಶಿಷ್ಟವಾದ ಪಾರದರ್ಶಕ ವಿನ್ಯಾಸಕ್ಕೆ ಹೆಸರುವಾಸಿಯಾಗಿವೆ. ಈ ವಿನ್ಯಾಸದ ತಯಾರಿಕೆಗೆ ಅತ್ಯುನ್ನತ ತಯಾರಿಕಾ ತಂತ್ರಜ್ಞಾನ ಮತ್ತು ತಾಂತ್ರಿಕ ಕುಶಲತೆ ಅಗತ್ಯವಾಗಿದೆ. ಈ ತಾಂತ್ರಿಕತೆಯೊಂದಿಗೆ ಭಾರತದಲ್ಲಿ ಫೋನ್ (2) ತಯಾರಾಗಲಿದೆ. ಭಾರತದ ಗ್ರಾಹಕರ ಬೇಡಿಕೆಯನ್ನು ಪೂರೈಸುವ ಸಲುವಾಗಿ ಭಾರತದಲ್ಲಿ ಫೋನ್ 2 ತಯಾರಿಸುತ್ತಿದ್ದೇವೆ. ಇದು ಸ್ಥಳೀಯ ಗ್ರಾಹಕರ ಬಗ್ಗೆ ನಮಗಿರುವ ಬದ್ಧತೆಯನ್ನು ತೋರಿಸುತ್ತದೆ.
ಫೋನ್ (2) ಅನ್ನು ಭಾರತದಲ್ಲಿ ತಯಾರಿಸುತ್ತೇವೆ ಎಂದು ಘೋಷಿಸಲು ನಾವು ಹೆಮ್ಮೆಪಡುತ್ತೇವೆ ಎಂದು ತಿಳಿಸಿದ್ದಾರೆ.
ಇಷ್ಟಲ್ಲದೇ, ಬೆಳೆಯುತ್ತಿರುವ ಬ್ರಾಂಡ್ ಆಗಿ ನಾವು ಪರಿಸರ ಸ್ನೇಹಿ ಮನೋಭಾವ ಹೊಂದಿದ್ದೇವೆ. ಫೋನ್ (2) ಅತ್ಯಂತ ಸುಸ್ಥಿರವಾದ ಸ್ಮಾರ್ಟ್ ಫೋನ್ ಗಳಲ್ಲೊಂದಾಗಿದೆ ಎಂದು ಅವರು ತಿಳಿಸಿದ್ದಾರೆ.
ಫೋನ್ 2 ರಲ್ಲಿ ಮರುಬಳಕೆಯ ಪ್ಲಾಸ್ಟಿಕ್, ಮರುಬಳಕೆಯ ಅಲ್ಯುಮಿನಿಯಂ ಮತ್ತು ಮರುಬಳಸಬಹುದಾದ ವಸ್ತುಗಳಿಂದ ತಯಾರಿಸಿದ ಬಿಡಿಭಾಗಗಳನ್ನು ಅಳವಡಿಸಲಾಗಿದೆ. ಹೀಗಾಗಿ ಇದು ಅಧಿಕ ಸುಸ್ಥಿರ ಫೋನ್ ಆಗಿ ರೂಪುಗೊಂಡಿದೆ ಎಂದು ಮನುಶರ್ಮ ತಿಳಿಸಿದ್ದಾರೆ.