Advertisement

ದೇಶೀ ಸಮರ ನೌಕೆ INS Kiltan ರಾಷ್ಟ್ರ ಸೇವೆಗೆ ಸಮರ್ಪಣೆ

12:28 PM Oct 16, 2017 | Team Udayavani |

ಹೊಸದಿಲ್ಲಿ :  ಜಲಾಂತರ್ಗಾಮಿ ನಿಗ್ರಹ ಸಮರಕ್ಕಾಗಿ ದೇಶೀಯವಾಗಿ ನಿರ್ಮಿಸಲ್ಪಟ್ಟಿರುವ ಐಎನ್‌ಎಸ್‌ ಕಿಲ್ತಾನ್‌ ನೂತನ ಭಾರತೀಯ ಸಮರ ನೌಕೆಯನ್ನು ಇಂದು ಸೋಮವಾರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ವಿಶಾಖಪಟ್ಟಣದ ನೌಕಾಪಡೆ ಧಕ್ಕೆಯಲ್ಲಿ ದೇಶ ಸೇವೆಗೆ ಅರ್ಪಿಸಿದರು.

Advertisement

ಐಎನ್‌ಎಸ್‌ ಕಿಲ್ತಾನ್‌ ಸಮರ ನೌಕೆಯನ್ನು ದೇಶ ಸೇವೆಗೆ ಸಮರ್ಪಿಸುವ ಈ ಕಾರ್ಯಕ್ರಮದಲ್ಲಿ ಅಡ್ಮಿರಲ್‌ ಸುನೀಲ್‌ ಲಾಂಬಾ, ಪಿವಿಎಸ್‌ಎಂ, ಎವಿಎಸ್‌ಎಂ, ಎಡಿಸಿ, ನೌಕಾಪಡೆ ಮುಖ್ಯಸ್ಥರು ಹಾಗೂ ಇನ್ನೂ ಅನೇಕ ಹಿರಿಯ ಅಧಿಕಾರಿಗಳು, ಗಣ್ಯರು ಭಾಗವಹಿಸಿದ್ದರು.

ಐಎನ್‌ಎಸ್‌ ಕಿಲ್ತಾನ್‌, ಸಮರ ನೌಕೆಯು ಸಂಪೂರ್ಣವಾಗಿ ದೇಶೀಯವಾಗಿ ನಿರ್ಮಾಣಗೊಂಡಿದ್ದು ಕೋಲ್ಕತಾದ ಗಾರ್ಡನ್‌ ರೀಚ್‌ ಶಿಪ್‌ ಬಿಲ್ಡರ್ಸ್‌ ಮತ್ತು ಇಂಜಿನಿಯರ್ ಸಂಸ್ಥೆ ಇದನ್ನು ನಿರ್ಮಿಸಿದೆ. ಇದು ಐಎನ್‌ಎಸ್‌ ಕಮೋರ್ತಾ ಮತ್ತು ಐಎನ್‌ಎಸ್‌ ಕದ್‌ಮತ್‌ ಶ್ರೇಣಿಯದ್ದಾಗಿದ್ದು ಇದೀಗ ಅವುಗಳೊಂದಿಗೆ ಇದು ದೇಶ ಸೇವೆಗೆ ತೊಡಗಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next