Advertisement

ದಾಸೋಹ ಪದ್ದತಿ ಪಾಲಿಸಲು ಮದರಿ ಸಲಹೆ

05:28 PM Jan 24, 2022 | Shwetha M |

ಮುದ್ದೇಬಿಹಾಳ: ಬಡವರಿಗೆ, ನಿರ್ಗತಿಕರಿಗೆ ಮಾಡುವ ದಾಸೋಹ ಎಂದಿಗೂ ವ್ಯರ್ಥವಾಗುವುದಿಲ್ಲ. ಶಿವಕುಮಾರ ಶ್ರೀಗಳ ಭೂಲೋಕದ ಅಂತ್ಯದ ದಿನವನ್ನು ವಿಶ್ವ ದಾಸೋಹದ ದಿನವೆಂದು ಘೋಷಿಸುತ್ತಾರೆ ಅಂದರೆ ದಾಸೋಹಕ್ಕಿರುವ ಮಹಿಮೆ ಎಂಥದ್ದು ಎಂದು ನಾವು ತಿಳಿದುಕೊಳ್ಳಬೇಕು ಎಂದು ತಾಲೂಕು ಕುರುಬರ ಸಂಘದ ಅಧ್ಯಕ್ಷ, ಅಹಿಲ್ಯಾದೇವಿ ಹೋಳ್ಕರ್‌ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಮಲ್ಲಿಕಾರ್ಜುನ ಮದರಿ ಹೇಳಿದರು.

Advertisement

ಕುಂಟೋಜಿ ಗ್ರಾಮದಲ್ಲಿ ಕುಮಾರೇಶ್ವರ ಜೀವನ ವಿಕಾಸ ಫೌಂಡೇಶನ್‌, ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಹಯೋಗದೊಂದಿಗೆ ಮಹಾಸಭಾದ ನಿರ್ದೇಶಕ ಮಲ್ಲಿಕಾರ್ಜುನಗೌಡ ಬಿರಾದಾರ ನೇತೃತ್ವದಲ್ಲಿ ಏರ್ಪಡಿಸಿದ್ದ ವಿಶ್ವ ದಾಸೋಹ ದಿನ ಹಾಗೂ ತುಮಕೂರು ಸಿದ್ದಗಂಗಾ ಮಠದ ಡಾ| ಶಿವಕುಮಾರ ಸ್ವಾಮೀಜಿಯವರ ಮೂರನೇ ಸ್ಮರಣೋತ್ಸವದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ದಾಸೋಹ ಪದ್ಧತಿ ಪಾಲಿಸಬೇಕು ಎಂದರು.

ಒಳ್ಳೆಯದನ್ನು ಮಾಡಿದವರಿಗೆ ಒಳ್ಳೆಯದೇ ಆಗುತ್ತದೆ, ಕೆಟ್ಟದ್ದು ಮಾಡಿದವರಿಗೆ ಕೆಟ್ಟದ್ದೇ ಆಗುತ್ತದೆ ಎನ್ನುವ ದೃಷ್ಟಾಂತ ನಮ್ಮ ಕಣ್ಣೆದುರಿಗೆ ಇವೆ. ದಾಸೋಹ ದಿನದಂದು ಮುದ್ದೇಬಿಹಾಳದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿಯವರು, ಕುಂಟೋಜಿಯಲ್ಲಿ ಮಲ್ಲಿಕಾರ್ಜುನಗೌಡ ಬಿರಾದಾರ ಅವರು ನಡೆಸಿರುವ ಅನ್ನದಾಸೋಹ ಮಾದರಿಯಾದದ್ದಾಗಿದ್ದು ಇದರಿಂದ ಹಸಿದವರು, ನಿರ್ಗತಿಕರಿಗೆ ಹೊಟ್ಟೆ ತುಂಬಿಸಿದ ಸಂತೃಪ್ತಿ ದೊರಕುತ್ತದೆ ಎಂದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ಸಂಸ್ಥಾನ ಹಿರೇಮಠದ ಡಾ| ಚನ್ನವೀರ ದೇವರು ಮಾತನಾಡಿ, ಡಾ| ಶಿವಕುಮಾರ ಸ್ವಾಮೀಜಿ ದಾಸೋಹದ ದೀಕ್ಷೆ ತೊಟ್ಟಿದ್ದರು. ಕಲಿಯುಗದಲ್ಲಿ ತ್ರಿವಿಧ ದಾಸೋಹಕ್ಕೆ ನಿಜವಾದ ಅರ್ಥ ತಂದುಕೊಟ್ಟ ಸಂತರು, ಮಹಾನ್‌ ಚೇತನರು. ಅವರ ಕೀತಿ ಅಜರಾಮರವಾಗಿರುತ್ತದೆ ಎಂದರು.

ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಮುದ್ದೇಬಿಹಾಳ ಪುರಸಭೆ ಮಾಜಿ ಸದಸ್ಯ ಬಸಯ್ಯ ನಂದಿಕೇಶ್ವರಮಠ, ಸಮಾಜ ಸೇವಕ ಶ್ರೀಶೈಲ ದೊಡ್ಡಮನಿ ರೂಢಗಿ ದಾಸೋಹದ ಮಹತ್ವದ ಕುರಿತು ಮಾತನಾಡಿದರು.

Advertisement

ದಾಸೋಹದ ರೂವಾರಿ ಮಲ್ಲಿಕಾರ್ಜುನಗೌಡ ಬಿರಾದಾರ ಅವರನ್ನು ಸನ್ಮಾನಿಸಲಾಯಿತು. ಮುದ್ದೇಬಿಹಾಳ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಗಣ್ಯರಾದ ಹನುಮಂತ್ರಾಯಗೌಡ ಬಿರಾದಾರ, ಬಿ.ಟಿ. ಬಿರಾದಾರ, ಡಾ| ವೀರೇಶ ಪಾಟೀಲ, ಚನ್ನಪ್ಪ ಸಜ್ಜನ, ಬಸವರಾಜ ಬಡಿಗೇರ, ಸಂಗನಗೌಡ ಬಿರಾದಾರ, ಬಸವರಾಜ ಬಿರಾದಾರ, ಮಲ್ಲಪ್ಪ ಯರಝರಿ, ಜಗದೀಶ ಲಮಾಣಿ, ಗಂಗಾಧರ ಹುಲಗಣ್ಣಿ, ಸಚಿನ ಚಿನ್ನಾಪುರ, ಸಂತೋಷ ಬಾದರಬಂಡಿ, ವಿರೇಶ ಢವಳಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next