ಹೊಸದಿಲ್ಲಿ: ಸ್ವತ್ಛ ಭಾರತ ಅಭಿಯಾನದಡಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮುಂದಿನ ಆರ್ಥಿಕ ವರ್ಷದಲ್ಲಿ ದೇಶದ ಒಂದು ಲಕ್ಷ ಮದರಸಾಗಳಲ್ಲಿ ಶೌಚಗೃಹಗಳನ್ನು ನಿರ್ಮಿಸಲು ಚಿಂತನೆ ನಡೆಸಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಹಾಯಕ ಸಚಿವ ಮುಖಾ¤ರ್ ಅಬ್ಟಾಸ್ ನಕ್ವಿ ಹೇಳಿದ್ದಾರೆ.
ಹಳೆಯ ಪದ್ಧತಿಗಳಿಗೆ ಬ್ರೇಕ್ ಹಾಕಲು ನಿರ್ಧರಿಸಿರುವ ಸರಕಾರ, ಬಿಸಿಯೂಟ ಮತ್ತು ಶಿಕ್ಷಕರಿಗೆ ತರಬೇತಿ ನೀಡುವ ಕೇಂದ್ರ ಗಳನ್ನು ಸ್ಥಾಪಿಸಲೂ ಸಿದ್ಧತೆ ನಡೆಸಿಕೊಂಡಿದೆ. ಈ ಯೋಜನೆಯಡಿಯಲ್ಲಿ ಶಿಕ್ಷಕರು, ಉಪಾಹಾರ ಮತ್ತು ಶೌಚಗೃಹ ನಿರ್ಮಾಣದ ಉದ್ದೇಶ ಹೊಂದಿದೆ ಎಂದು ನಕ್ವಿ ತಿಳಿಸಿದ್ದಾರೆ.
ಮೌಲಾನಾ ಆಜಾದ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಕಾರ್ಯಕಾರಿಣಿ ಸಮಿತಿ ಜತೆ ನಡೆದ ಸಭೆಯ ಬಳಿಕ ಪ್ರತಿಕ್ರಿಯಿಸಿದ ನಕ್ವಿ, “3ಟಿ’ ಫಾರ್ಮುಲಾ (ಟೀಚರ್, ಟಿಫಿನ್ ಮತ್ತು ಟಾಯ್ಲೆಟ್ಸ್)ದಂತೆ ಕಾರ್ಯನಿರ್ವಹಿಸಲು ಚರ್ಚಿಸಲಾಯಿತು. ಟಿಫಿನ್‌ಗೆ ಬಿಸಿಯೂಟ ಎಂಬಂರ್ಥ ಅಷ್ಟೆ. ಸ್ವತ್ಛಭಾರತ ಅಭಿಯಾನದಡಿಯಲ್ಲೇ ಇದು ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಬೇಗಮ್ ಹಝರತ್ ಯೋಜನೆಯಡಿ ಪ್ರತಿವರ್ಷ 20,000 ಬಾಲಕಿಯರು ಸಹಾಯ ಪಡೆದುಕೊಳ್ಳುತ್ತಿದ್ದು, ವರ್ಷಾಂತ್ಯಕ್ಕೆ ಇದನ್ನು 45,000ಕ್ಕೆ ಹೆಚ್ಚಿಸುವ ಉದ್ದೇಶ ಹೊಂದಿದೆ ಎಂದಿದ್ದಾರೆ.
ಗರೀಬ್ ನವಾಜ್ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ 100 ಕೌಶಲ್ಯ ಅಭಿವೃದ್ಧಿ ಕೇಂದ್ರ ತೆರೆಯುವ ಉದ್ದೇಶವಿದೆ. ಅಲ್ಲದೇ ವಿಶ್ವದರ್ಜೆಯ ಸಂಸ್ಥೆ ನಿರ್ಮಾಣದ ಬಗ್ಗೆಯೂ ಚರ್ಚಿಸಿದ್ದೇವೆ.
ಮುಖಾ¤ರ್ ಅಬ್ಟಾಸ್ ನಕ್ವಿ, ಕೇಂದ್ರ ಸಚಿವ