Advertisement

ಉಚಿತ ಬಿತ್ತನೆ ಬೀಜ-ಗೊಬ್ಬರ ನೀಡಿ

05:14 PM Jun 03, 2020 | Naveen |

ಮಾದನ ಹಿಪ್ಪರಗಿ: ಕೋವಿಡ್ ವೈರಸ್‌ ಹಾವಳಿಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಸರ್ಕಾರ ಬಿತ್ತನೆ ಬೀಜ ಮತ್ತು ರಸಗೊಬ್ಬರ ಉಚಿತವಾಗಿ ನೀಡಬೇಕು ಎಂದು ನವ ಕರ್ನಾಟಕ ರಾಜ್ಯ ರೈತ ಸಂಘದ ಕೋಶಾಧ್ಯಕ್ಷರಾದ ಸಿದ್ರಾಮಪ್ಪ ಪೊಲೀಸ್‌ಪಾಟೀಲ ಆಗ್ರಹಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮುಂಗಾರು ಆರಂಭಗೊಳ್ಳುತ್ತಿದೆ. ಒಂದೆರಡು ಉತ್ತಮ ಮಳೆಯಾದರೆ ಮುಂಗಾರು ಬಿತ್ತನೆ ಕಾರ್ಯ ಆರಂಭಿಸುವರು. ಬೀಜ ಮತ್ತು ಗೊಬ್ಬರ ಖರೀದಿಗೆ ರೈತರ ಬಳಿ ಹಣ ಇಲ್ಲ. ಬೀಜ ಮತ್ತು ಗೊಬ್ಬರ ಖರೀದಿಗೆ ಖಾಸಗಿ ಮಾಲೀಕತ್ವದ ಕೃಷಿ ಭಂಡಾರಗಳಲ್ಲಿ ಸಾಲ ಮಾಡಿ ಅಥವಾ ಮತ್ತು ಅಡತ್‌ ಗಳ ಮಾಲೀಕರಲ್ಲಿ ಮುಂದೆ ಬರುವ ಬೆಳೆಯನ್ನು ಅಡ(ಗಿರವಿ)ಇಟ್ಟು ಖರೀದಿ ಮಾಡುತ್ತಾರೆ. ಅಂತಹ ವ್ಯವಸ್ಥೆಯಿಂದ ರೈತರು ಹೊರಬರಬೇಕಾದರೆ ಸರಕಾರ ಅವರಿಗೆ ಉಚಿತವಾಗಿ ಬಿತ್ತನೆ ಬೀಜ ಮತ್ತು ಗೊಬ್ಬರ ನೀಡಬೇಕು ಎಂದರು. ಮುಖಂಡರಾದ ಮಲ್ಲಯ್ಯ ಸ್ವಾಮಿ ಮದಗುಣಕಿ, ಮಹಾಂತಯ್ಯ ಸ್ವಾಮಿ, ನಾಗಪ್ಪ ಗಿದನಿ, ಮಹಿಬೂಬ ಫಣಿಬಂದ್‌ ಅನೇಕ ರೈತ ಮುಖಂಡರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next