ಬೆಂಗಳೂರು: ಶಾಸಕ ಮಾಡಾಳು ವಿರೂಪಾಕ್ಷಪ್ಪ ಪುತ್ರ ಲೋಕಾಯುಕ್ತ ಬಲೆಗೆ ಬಿದ್ದ ವಿಚಾರ ಸರ್ಕಾರಕ್ಕೆ ಮುಜಗರವೇನೋ ಸತ್ಯ, ಆದರೆ ವಿರೂಪಾಕ್ಷಪ್ಪ ಅವರ ಜಾಮೀನು ವಿಚಾರದಲ್ಲಿ ಲೋಕಾಯುಕ್ತ ಪರ ವಕೀಲರು ಸಮಂಜಸ ವಾದ ಮಂಡಿಸದೇ ಇದ್ದರೆ ಅದಕ್ಕೆ ಸಂಬಂಧಪಟ್ಟವರೇ ಹೊಣೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಸಮಾಜ, ಸರ್ಕಾರ ಎಂದರೆ ಸಾಗರವಿದ್ದಂತೆ. ಒಮ್ಮೊಮ್ಮೆ ಇಂಥ ಘಟನೆಗಳು ನಡೆಯುತ್ತವೆ. ಆದಾಗಿಯೂ ಇದು ಸರ್ಕಾರಕ್ಕೆ ಮುಜುಗರ ತಂದಿದೆ ಎಂಬ ವಾದವನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದರು.
ವಿರೂಪಾಕ್ಷಪ್ಪ ಅವರಿಗೆ ಜಾಮೀನು ಸಿಕ್ಕಿರುವುದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ. ಲೋಕಾಯುಕ್ತ ಪೊಲೀಸರು ಹಾಗೂ ವಕೀಲರ ಕಾರ್ಯವಿಧಾನ ಹೀಗೆ ಇರಬೇಕೆಂದು ಸರ್ಕಾರ ನಿರ್ದೇಶನ ನೀಡಲು ಸಾಧ್ಯವಿಲ್ಲ.
ಲೋಕಾಯುಕ್ತದ ವಕೀಲರು ಸಮರ್ಥ ವಾದ ಮಂಡಿಸಿಲ್ಲ ಎಂಬ ಮಾತು ಕೇಳಿ ಬಂದರೆ ಅದಕ್ಕೆ ಸಂಬಂಧಪಟ್ಟವರೇ ಜವಾಬುದಾರರು. ಪ್ರಶ್ನೆಯನ್ನು ಅವರಿಗೆ ಕೇಳಬೇಕು ಎಂದರು.
Related Articles
ಬಂಧನವಾಗಿ ಆರು ದಿನ ಕಳೆದರೂ ಪ್ರಶಾಂತ್ ಮಾಡಾಳು ಅಮಾನತುಗೊಳ್ಳದೇ ಇರುವ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಮಾಹಿತಿ ಇಲ್ಲ. ಜಲಮಂಡಳಿಯಿಂದ ಮಾಹಿತಿ ಪಡೆದುಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದರು.