ಪಿರಿಯಾಪಟ್ಟಣ: ಕೃಷಿ ಕಾರ್ಮಿಕರ ಕೊರತೆ ಎದುರಿಸುತ್ತಿರುವ ರೈತರು ಯಾಂತ್ರೀಕರಣದ ಮೂಲಕ ವೈಜಾnನಿಕ ಕೃಷಿಯನ್ನು ಅಳವಡಿಸಿಕೊಳ್ಳಬೇಕೆಂದು ಶಾಸಕ ಕೆ.ವೆಂಕಟೇಶ್ ತಿಳಿಸಿದರು.
ತಾಲೂಕು ಪಂಚಾಯಿತಿ ಆವರಣದಲ್ಲಿ ಕೃಷಿ ಇಲಾಖೆಯ ಕೃಷಿ ಯಾಂತ್ರೀಕರಣ ಯೋಜನೆಯಲ್ಲಿ ರೈತರಿಗೆ ಸಹಾಯಧನಡಿಯಲ್ಲಿ ಯಂತ್ರೋಪಕರಣಗಳನ್ನು ವಿತರಿಸಿ ಮಾತನಾಡಿದರು. ಕೃಷಿ ಕ್ಷೇತ್ರದಲ್ಲಿ ಅತಿದೊಡ್ಡ ಸಮಸ್ಯೆ ಎಂದರೆ ಕೃಷಿ ಕಾರ್ಮಿಕರದ್ದು. ಹಲವರು ಇದರಿಂದಾಗಿಯೇ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಆದ್ದರಿಂದ ಆಧುನಿಕ ಯುಗದಲ್ಲಿ ಅನೇಕ ಯಂತ್ರಗಳನ್ನು ಪರಿಚಯಿಲಾಗಿದೆ ಎಂದರು.
ದಲಿತರಿಗೆ ಶೇ.90 ಸಹಾಯಧನ: ಸಹಾಯಕ ಕೃಷಿ ನಿರ್ದೇಶಕ ಶಿವರಾಮೇಗೌಡ ಮಾತನಾಡಿ, ಕೃಷಿ ಇಲಾಖೆಯ ಕೃಷಿ ಯಾಂತ್ರೀಕರಣ ಯೋಜನೆಯಲ್ಲಿ ಸಾಮಾನ್ಯ ರೈತರಿಗೆ ಶೇ.50 ಸಹಾಯಧನದಲ್ಲಿ ಹಾಗೂ ಎಸ್ಸಿ, ಎಸ್ಟಿ ರೈತರಿಗೆ ಶೇ.90 ಸಹಾಧನದಲ್ಲಿ ಕೃಷಿ ಯಂತ್ರೋಪಕರಣಗಳಾದ ಮಿನಿ ಪವರ್ ಟ್ರಿಲ್ಲರ್, ಕಳೆ ತೆಗೆಯುವ ಹಂತ್ರ, ಡೀಸೆಲ್ ಪಂಪ್‌ಸೆಟ್ ವಿತರಿಸಲಾಗುತ್ತಿದೆ.
ಈ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಯೋಜನೆಯಡಿ ರೈತರಿಗೆ ಶೇ.90 ಸಹಾಯಧನ ದೊರೆಯುತ್ತಿದೆ. ಈ ಯೋಜನೆಯಡಿ ಕೃಷಿ ಹೊಂಡ ನಿರ್ಮಿಸಿದವರಿಗೆ ಹೊಂಡಕ್ಕೆ ಟಾರ್ಪಾಲ್ ಹೊದಿಕೆ ಹಾಗೂ ಡೀಸೆಲ್ ಪಂಪ್‌ಸೆಟ್ ಮತ್ತು ಸ್ಪಿಂಕ್ಲರ್ ಘಟಕವನ್ನು ನೀಡಲಾಗುತ್ತಿದೆ. ತಾಲೂಕಿನ ರೈತರು ಇದರ ಸದುಪಯೋಗ ಪಡೆಯಬೇಕು ಎಂದರು.
ತಾಪಂ ಅಧ್ಯಕ್ಷೆ ಕೆ.ಆರ್.ನಿರೂಪ, ಸದಸ್ಯರಾದ ಶ್ರೀನಿವಾಸ್, ಪುರಸಭಾ ಸದಸ್ಯರಾದ ಎಂ.ಸುರೇಶ್, ಮಂಜು, ತ್ರಿನೇಶ್, ಜಿಪಂ ಮಾಜಿ ಸದಸ್ಯ ಎಚ್.ಆರ್.ಗೋಪಾಲ್, ಎಪಿಎಂಸಿ ಮಾಜಿ ಅಧ್ಯಕ್ಷ ಲೋಕೇಶ್, ನಿರ್ದೇಶಕರಾದ ಮೋಹನ್‌ಕುಮಾರ್, ಸುರೇಶ್, ಕೃಷಿ ಅಧಿಕಾರಿ ಬಾಬು, ನಿವೃತ್ತ ಎಡಿಎ ಚಂದ್ರೇಗೌಡ, ಮುಖಂಡರಾದ ಕಾನೂನು ಗೋವಿಂದೇಗೌಡ, ನಾಗಣ್ಣ ಮತ್ತಿತರ ಫಲಾನುಭವಿಗಳು ಪಾಲ್ಗೊಂಡಿದ್ದರು.