ಕೋಟ: ಮಾಬುಕಳ ಸೇತುವೆ ಸಮೀಪ ಸೀತಾನದಿಯ ತಟದಲ್ಲಿ ರಾಶಿ ಬಿದ್ದಿದ್ದ ತ್ಯಾಜ್ಯವನ್ನು ಸ್ಥಳೀಯ ಬಾಂಧವ್ಯ ಬ್ಲಿಡ್ ಕರ್ನಾಟಕದ ನೇತƒತ್ವದಲ್ಲಿ 10ಕ್ಕೂ ಹೆಚ್ಚಿನ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶ್ರಮದಾನ ಮೂಲಕ ಸ್ವತ್ಛಗೊಳಿಸುವ ಕಾರ್ಯ ನಡೆಸಲಾಯಿತು.
ಈ ಪ್ರದೇಶದಲ್ಲಿ ಅನಾಗರಿಕರು ತ್ಯಾಜ್ಯಗಳನ್ನು ಹೆದ್ದಾರಿಯ ಎರಡೂ ಕಡೆಗಳಲ್ಲಿ ಎಸೆದು ಹೋಗುತ್ತಿದ್ದರು. ಇದರಿಂದ ಹೆದ್ದಾರಿಯಲ್ಲಿ ಸಾಗುವಾಗ ದುರ್ನಾತ ಬೀರುವುದರ ಜತೆಗೆ ಅನೇಕ ರೋಗಗಳು ಬರುವ ಸಾಧ್ಯತೆ ಇತ್ತು.
ಸಮೀಪದಲ್ಲೇ ಸೀತಾನದಿ ಹರಿಯುತ್ತಿದ್ದು, ತ್ಯಾಜ್ಯಗಳು ಮಳೆಗಾಲದಲ್ಲಿ ನದಿ ಸೇರಿ ನೀರು ಕಲುಷಿತವಾಗುವ ಅಪಾಯದಲ್ಲಿತ್ತು.
100ಕ್ಕೂ ಹೆಚ್ಚು ಕಾರ್ಯಕರ್ತರು ದಿನವಿದೀ ಹೆದ್ದಾರಿಯ ಎರಡೂ ಕಡೆಯ ಸ್ವತ್ಛ ಮಾಡಿ ಸುಮಾರು 15ಲೋಡ್ ತ್ಯಾಜ್ಯವನ್ನು ತೆಗೆದು ಸ್ವತ್ಛಗೊಳಿಸಿದರು. ಮುಂದಿನ ರವಿವಾರ ಕೂಡ ಸ್ವತ್ಛತೆ ಮುಂದುವರಿಸಿ ಸಂಪೂರ್ಣವಾಗಿ ತ್ಯಾಜ್ಯದ ಸಮಸ್ಯೆಗೆ ಮುಕ್ತಿ ನೀಡಲಾಗುವುದು ಎಂದು ಸಂಸ್ಥೆಯ ಮುಖ್ಯಸ್ಥ ದಿನೇಶ್ ಬಾಂಧವ್ಯ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಸ್ಥಳೀಯ ಪಾಂಡೇಶ್ವರ, ಹಾರಾಡಿ, ಹಂದಾಡಿ ಮತ್ತು ವಾರಂಬಳ್ಳಿ ಗ್ರಾಮ ಪಂಚಾಯತ್‌ಗಳು ಸ್ವತ್ಛತಾ ಕಾರ್ಯಕ್ಕೆ ಸಹಕಾರ ನೀಡುವ ಭರವಸೆ ನೀಡಿದ್ದಾರೆ.