Advertisement

Sandalwood; ‘ಮಾರ್‌’ ಮುಹೂರ್ತಕ್ಕೂ ಮೊದಲೇ ಹಾಡು ಬಿಡುಗಡೆ

09:11 AM Oct 01, 2023 | Team Udayavani |

ಸಾಮಾನ್ಯವಾಗಿ ಬಹುತೇಕ ಚಿತ್ರತಂಡದವರು ಮೊದಲು ತಮ್ಮ ಸಿನಿಮಾದ ಮುಹೂರ್ತ ಮಾಡಿಕೊಂಡು ನಂತರ ಚಿತ್ರೀಕರಣದ ಅಖಾಡಕ್ಕೆ ಇಳಿಯುತ್ತದೆ. ಆದರೆ ಇಲ್ಲೊಂದು ಚಿತ್ರತಂಡ ಮೊದಲು ತಮ್ಮ ಸಿನಿಮಾದ ಹೀರೋ ಇಂಟ್ರೊಡಕ್ಷನ್‌ ಹಾಡನ್ನು ಚಿತ್ರೀಕರಿಸಿಕೊಂಡು, ಹೀರೋ ತೆರೆಮೇಲೆ ಹೇಗೆ ಕಾಣಿಸುತ್ತಾರೆ ಹಾಗೂ ಹೀರೋ ಕಾನ್ಫಿಡೆನ್ಸ್‌ ಹೇಗಿದೆ ಎಂಬುದನ್ನು ಸ್ಯಾಂಪಲ್‌ ಚೆಕ್‌ ಮಾಡಿಕೊಂಡು ನಂತರ ಮುಹೂರ್ತವನ್ನು ಮಾಡಿ, ಚಿತ್ರೀಕರಣಕ್ಕೆ ಮುಂದಾಗುತ್ತಿದೆ. ಅಂದಹಾಗೆ, ಆ ಸಿನಿಮಾದ ಹೆಸರು “ಮಾರ್‌’.

Advertisement

ಹೌದು, ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಮಿಂಚಬೇಕು ಎನ್ನುವ ಆಸೆ ಇಟ್ಟುಕೊಂಡಿರುವ, ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ ಅನುಭವವಿರುವ ವಿಜಯ್‌ ವೆಂಕಟೇಶ್‌ ಮೊದಲ ಬಾರಿಗೆ “ಮಾರ್‌’ ಸಿನಿಮಾದ ಮೂಲಕ ಹೀರೋ ಆಗಿ ಸ್ಯಾಂಡಲ್‌ವುಡ್‌ಗೆ ಪರಿಚಯವಾಗುತ್ತಿದ್ದಾರೆ. “ಮಾರ್‌’ ಚಿತ್ರಕ್ಕೆ ಅನಿಲ್‌ ವೆಂಕಟರಾಜು ನಿರ್ದೇಶನ ಮಾಡುತ್ತಿದ್ದಾರೆ.

ಇತ್ತೀಚೆಗೆ ನಾಯಕ ನಟ ವಿಜಯ್‌ ವೆಂಕಟೇಶ್‌ ಜನ್ಮದಿನದ ಸಂಭ್ರಮದಲ್ಲಿ “ಮಾರ್‌’ ಸಿನಿಮಾದ ಹೀರೋ ಇಂಟ್ರೊಡಕ್ಷನ್‌ ಸಾಂಗ್‌ ಬಿಡುಗಡೆಯಾಯಿತು. ನಟ ಶ್ರೇಯಸ್‌ ಮಂಜು ಈ ಮೊದಲ ಹಾಡನ್ನು ರಿಲೀಸ್‌ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಕೃಷ್ಣ ಸುಮೈರಾ ಸಂಗೀತ ಸಂಯೋಜನೆಯಲ್ಲಿ “ಮಾರ್‌’ ಸಿನಿಮಾದ ಹೀರೋ ಇಂಟ್ರೊಡಕ್ಷನ್‌ ಹಾಡು ಮೂಡಿಬಂದಿದ್ದು ನಿರ್ದೇಶಕ ಅನಿಲ್‌ ಸಾಹಿತ್ಯ ರಚಿಸಿದ್ದಾರೆ. ಈ ಹಾಡಿಗೆ ಸುಹಾಸ್‌ ಛಾಯಾಗ್ರಹಣ, ಪ್ರವೀಣ್‌ ಕೊರಿಯೋಗ್ರಫಿ ಇದೆ. ಇದೇ ವೇಳೆ ನಟ ವಿಜಯ್‌ ವೆಂಕಟೇಶ್‌ ಹೀರೊ ಆಗಿ ಎಂಟ್ರಿಕೊಡುವ ಜೊತೆಗೆ “ಹಾರಿಕಾ ಪ್ರೊಡಕ್ಷನ್‌’ ಹೌಸ್‌ ಕೂಡ ಲಾಂಚ್‌ ಮಾಡಿದ್ದಾರೆ. ನಟನೆ ಜೊತೆಗೆ ನಿರ್ಮಾಪಕ ನಾಗಿಯೂ ವಿಜಯ್‌ ಮೊದಲ ಹೆಜ್ಜೆ ಇಡುತ್ತಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆ ಮೂಲಕ ಅನೇಕ ಯುವ ಪ್ರತಿಭೆಗಳಿಗೆ ಅವಕಾಶಕೊಡುವ ಪ್ಲಾನ್‌ ಇಟ್ಟುಕೊಂಡಿದ್ದಾರೆ ವಿಜಯ್. ಇದೇ ಬ್ಯಾನರ್‌ನಲ್ಲಿ “ಮಾರ್‌’ ಸಿನಿಮಾ ನಿರ್ಮಾಣವಾಗುತ್ತಿದೆ.

ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಬಿಡುಗಡೆ ಆಗುತ್ತಿದ್ದು ಸದ್ಯ ರಿಲೀಸ್‌ ಆಗಿರುವ ಈ ಹಾಡು ಕೂಡ ಕನ್ನಡದ ಜೊತೆಗೆ ತೆಲುಗಿನಲ್ಲೂ ಬಿಡುಗಡೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next