Advertisement

Maamannan: ವಡಿವೇಲು‌,ಉದಯನಿಧಿ ಅಭಿನಯದ “ಮಾಮಣ್ಣನ್” ಓಟಿಟಿ ತೆರೆಗೆ ಡೇಟ್‌ ಫಿಕ್ಸ್

12:22 PM Jul 18, 2023 | Team Udayavani |

ಚೆನ್ನೈ: ಮಾರಿ ಸೆಲ್ವರಾಜ್ ಅವರ “ಮಾಮಣ್ಣನ್” ಈ ವರ್ಷ ಕಾಲಿವುಡ್‌ ರಂಗದಲ್ಲಿ ಹೆಸರು ಮಾಡಿದ ಸಿನಿಮಾಗಳಲ್ಲೊಂದು. ಬಾಕ್ಸ್‌ ಆಫೀಸ್‌ ನಲ್ಲಿ ಭರ್ಜರಿ ಕಲೆಕ್ಷನ್‌ ಕಂಡು ಪ್ರೇಕ್ಷಕರ ಮನಗೆದ್ದ ಸಿನಿಮಾ ಇದೀಗ ಓಟಿಟಿಯಲ್ಲಿ ಸ್ಟ್ರೀಮ್‌ ಆಗಲು ಡೇಟ್‌ ಫಿಕ್ಸ್‌ ಆಗಿದೆ.

Advertisement

“ಮಾಮಣ್ಣನ್” ಒಂದು ಪೊಲಿಟಿಕಲ್‌ ಥ್ರಿಲ್ಲರ್‌ ಡ್ರಾಮಾ ಸಿನಿಮಾವಾಗಿದ್ದು, ಜೂ.29 ರಂದು ಥಿಯೇಟರ್‌ ನಲ್ಲಿ ರಿಲೀಸ್‌ ಆಗಿತ್ತು. ಕೆಳ ಜಾತಿಯ ಒಬ್ಬ ಎಂಎಲ್‌ ಎ(ವಡಿವೇಲು) ಅವರ ಮಗ ಅತಿವೀರನ್ (ಉದಯನಿಧಿ ಸ್ಟಾಲಿನ್) ಹಾಗೂ  ಉನ್ನತ ಜಾತಿಯ ಒಬ್ಬ ರಗಡ್ ರಾಜಕಾರಣಿ ರತ್ನವೇಲು (ಫಾಹದ್ ಫಾಸಿಲ್) ನಡುವೆ ಸಿನಿಮಾದ ಕಥೆ ಸಾಗುತ್ತದೆ. ಒಬ್ಬ ಎಂಎಲ್‌  ಎ ಆಗಿಯೂ ಉನ್ನತ ಜಾತಿಯವರ ಮುಂದೆ ಕೈಕಟ್ಟಿ ತಲೆಬಾಗಿ ನಿಂತುಕೊಂಡೇ ಇರುವ ನಿಯಮದ ವಿರುದ್ಧ ರಾಜಕೀಯವಾಗಿಯೇ ಹೋರಾಟವನ್ನು ಮಾಡುವ ಕಥೆಯನ್ನು ಬಹಳ ಎಂಗೇಜ್‌ ಆಗಿ ನಿರ್ದೇಶಕರು ಹೇಳಿದ್ದಾರೆ.

ಇಡೀ ಸಿನಿಮಾ ಒಂದು ಹಳ್ಳಿಯ ಹಿಂದಿನ ಕಾಲದ ಕಥೆ, ಪ್ರಸ್ತುತ ರಾಜಕೀಯ ಪ್ರತಿಷ್ಠೆ ಹಾಗೂ ಜಾತಿ ವ್ಯವಸ್ಥೆಯ ಸ್ಥಿತಿಯನ್ನು ತೋರಿಸುತ್ತದೆ. ವಡಿವೇಲು, ಫಾಹದ್‌ ಹಾಗೂ ಉದಯನಿಧಿ ಸ್ಟಾಲಿನ್ ಈ ಮೂರು ಜನರ ಪಾತ್ರಗಳು ಪ್ರೇಕ್ಷಕರ ಮನಗೆಲ್ಲುತ್ತದೆ.

ಇದನ್ನೂ ಓದಿ: B’town: ನಾನಿನ್ನೂ ಗರ್ಭಿಣಿಯಾಗಿಲ್ಲ.. ಮದುವೆ ಪ್ರಶ್ನೆಗೆ‌ ನಟಿ ತಾಪ್ಸಿ ಕೊಟ್ಟ ಉತ್ತರ ವೈರಲ್

ಸಿನಿಮಾ ಓಟಿಟಿಯಲ್ಲಿ ಪರದೆಯಲ್ಲಿ ಬರಲು ರೆಡಿಯಾಗಿದ್ದು, ಇದೇ ಜು.27 ರಂದು ನೆಟ್‌ ಫ್ಲಿಕ್ಸ್‌ ನಲ್ಲಿ ಸಿನಿಮಾ ಸ್ಟ್ರೀಮ್‌ ಆಗಲಿದೆ. ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ಸ್ಟ್ರೀಮ್‌ ಆಗಲಿದೆ.

Advertisement

ಸಿನಿಮಾ ಜಾತಿ ತಾರತಮ್ಯದ ಕಥೆಯನ್ನು ಒಳಗೊಂಡಿದ್ದು, ಸಿನಿಮಾ ತೆರೆಗೆ ಬಂದ ಬಳಿಕ ತಮಿಳುನಾಡಿನಲ್ಲಿ ರಾಜಕೀಯವಾಗಿಯೂ ಚರ್ಚೆಯಾಗಿತ್ತು. ಸ್ವತಃ ಯುವಜನ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವರಾಗಿರುವ ಉದಯನಿಧಿ ಸ್ಟ್ಯಾಲಿನ್‌ ಅವರಿಗೆ ನಿರ್ದೇಶಕ ಪಾ ರಂಜಿತ್ ಅವರು “ತಮ್ಮದೇ ಪಕ್ಷದಲ್ಲಿನ ಜಾತಿ ಪಕ್ಷಪಾತವನ್ನು ಮೊದಲು ಪರಿಶೀಲಿಸಿ” ಎಂದು ಹೇಳಿದ್ದರು. ಇದಕ್ಕೆ”ಎಲ್ಲಾ ರಾಜಕೀಯ ಪಕ್ಷಗಳಿಂದ ಜಾತಿ ತಾರತಮ್ಯವನ್ನು ತೊಡೆದುಹಾಕಬೇಕು ಮತ್ತು “ಡಿಎಂಕೆ ಸರ್ಕಾರವು ಅಧಿಕಾರದಲ್ಲಿದ್ದಾಗ, ವಿವಿಧ ಕಾನೂನುಗಳು ಮತ್ತು ಕಾರ್ಯಕ್ರಮಗಳ ಮೂಲಕ ನಿರಂತರವಾಗಿ ಸಾಮಾಜಿಕ ನ್ಯಾಯವನ್ನು ರಕ್ಷಿಸಿದೆ” ಎಂದು ಉದಯಂದಿ ಪ್ರತಿಕ್ರಿಯಿಸಿದ್ದರು.

“ಮಾಮಣ್ಣನ್” ಸಿನಿಮಾಕ್ಕೆ ಎಆರ್ ರೆಹಮಾನ್ ಅವರು ಮ್ಯೂಸಿಕ್‌ ನೀಡಿದ್ದು, ವಡಿವೇಲು ಹಾಡಿದ “ರಾಸ ಕಣ್ಣು” ಹಾಡು ಗಮನ ಸೆಳೆದಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next