Advertisement

ಎಂ.ಎಸ್.‌ ರಾಮಯ್ಯ ಸಂಸ್ಥೆಯಿಂದ ಅಡಿಕೆ ಸಂಶೋಧನೆ

03:35 AM Sep 25, 2020 | Hari Prasad |

ಬೆಂಗಳೂರು: ಅಡಿಕೆ ಕುರಿತ ಸಂಶೋಧನೆ ಹಾಗೂ ಕ್ಲಿನಿಕಲ್‌ ಟ್ರಯಲ್‌ ಕೈಗೊಳ್ಳುವ ಹೊಣೆಯನ್ನು ಎಂ.ಎಸ್‌. ರಾಮಯ್ಯ ಸಂಸ್ಥೆಯ ಅಪ್ಲೈಡ್‌ ಸೈನ್ಸ್‌ ವಿಭಾಗಕ್ಕೆ ವಹಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ.

Advertisement

ಅಡಿಕೆ ಟಾಸ್‌ಕರ್ಸ್‌ ಅಧ್ಯಕ್ಷ ಹಾಗೂ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ವಿಕಾಸ ಸೌಧದಲ್ಲಿ ಗುರುವಾರ ಜರಗಿದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಟಾಸ್ಕ್ಫೋರ್ಸ್‌ ರಚನೆ ಬಳಿಕ ನಡೆದ ಮೂರನೇ ಸಭೆ ಇದಾಗಿದ್ದು, ರಾಮಯ್ಯ ಸಂಸ್ಥೆಯ ತಜ್ಞರೂ ಭಾಗಿಯಾಗಿದ್ದರು. ಮುಂದಿನ 15 ತಿಂಗಳ ಅವಧಿಯಲ್ಲಿ ತಜ್ಞರು ವರದಿ ಸಲ್ಲಿಸಲಿದ್ದಾರೆ.

ರಿಸರ್ಚ್‌ ಸೆಂಟರ್‌ಗೆ ಮನವಿ
ತೀರ್ಥಹಳ್ಳಿಯಲ್ಲಿ ಅಡಿಕೆ ಸಂಶೋಧನ ಕೇಂದ್ರ ಪ್ರಾರಂಭಿಸುವುದಾಗಿ ಕಳೆದ ಚುನಾವಣೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭರವಸೆ ನೀಡಿದ್ದರು.

ಈ ಉದ್ದೇಶಕ್ಕೆ 10 ಕೋ. ರೂ. ಒದಗಿಸುವುದಾಗಿ ಈ ಹಿಂದೆ ಕೇಂದ್ರ ಕೃಷಿ ಸಚಿವರಾಗಿದ್ದ ರಾಧಾ ಮೋಹನ್‌ ಸಿಂಗ್‌ ಹೇಳಿದ್ದರು. ಈ ಬಗ್ಗೆ ಅಮಿತ್‌ ಶಾ ಅವರನ್ನು ಭೇಟಿಯಾಗಿ ಪ್ರಸ್ತಾವನೆ ಸಲ್ಲಿಸಲು ನಿರ್ಣಯಿಸಲಾಯಿತು. ಜತೆಗೆ ಆಮದು ಅಡಿಕೆಯ ದರವನ್ನು ಕೆ.ಜಿ.ಗೆ 250ರಿಂದ 350 ರೂ.ಗೆ ಹೆಚ್ಚಿಸಲು ವಾಣಿಜ್ಯ ಸಚಿವರಿಗೆ ಮನವಿ ಸಲ್ಲಿಸಬೇಕು.

Advertisement

ಸ್ವೀಟ್‌ ಸುಪಾರಿ ಮತ್ತು ಸೆಂಟೆಡ್‌ ಸುಪಾರಿಗಳ ಮೇಲಿನ ಜಿಎಸ್‌ಟಿ ತೆರಿಗೆ ಪ್ರಮಾಣವನ್ನು ಶೇ.18ರಿಂದ 13ಕ್ಕೆ ಇಳಿಸಲು ಜಿಎಸ್‌ಟಿ ಕೌನ್ಸಿಲ್‌ನ ರಾಜ್ಯದ ಪ್ರತಿನಿಧಿ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ನೀಡಲು ಹಾಗೂ ಅಡಿಕೆ ಸಂಬಂಧಿಸಿದ ಸಂಶೋಧನೆ ಮುಗಿಯುವವರೆಗೆ ಸುಪ್ರೀಂ ಕೋರ್ಟ್‌ ವಿಚಾರಣೆಗೆ ತಡೆ ಕೋರಲು ನಿರ್ಧರಿಸಲಾಯಿತು.

ತೋಟಗಾರಿಕೆ ಇಲಾಖೆ ನಿರ್ದೇಶಕ ಹಾಗೂ ಕಾರ್ಯಪಡೆ ಮೆಂಬರ್‌ ಸೆಕ್ರೆಟರಿ ವೆಂಕಟೇಶ್‌, ಅಡಿಕೆ ಕಾರ್ಯಪಡೆ ಸದಸ್ಯರಾದ ಶಿವಕುಮಾರ್‌, ಸುಬ್ರಹ್ಮಣ್ಯ, ಹರಿಪ್ರಕಾಶ ಕೋಣೆಮನೆ ಮತ್ತಿತರರು ಉಪಸ್ಥಿತರಿದ್ದರು.

ಅಡಕೆ ಕುರಿತ ರಿಸರ್ಚ್‌ಗೆ ಎಂ.ಎಸ್‌. ರಾಮಯ್ಯ ಸಂಸ್ಥೆಯವರು ಪ್ರಸ್ತಾವನೆ ಸಲ್ಲಿಸಿ¨ªಾರೆ. 18 ತಿಂಗಳಲ್ಲಿ ವರದಿ ಬರಲಿದೆ. ಇದಕ್ಕೆ ಬೇಕಾದ ಅನುದಾನಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
– ಆರಗ ಜ್ಞಾನೇಂದ್ರ, ಅಡಿಕೆ ಟಾಸ್ಕ್ಫೋರ್ಸ್‌ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next