Advertisement

ನಿನಗೆ ತಾಕತ್ತಿದ್ದರೆ ರಾಜ್ಯ ಬಂದ್ ಮಾಡು ನೋಡೋಣ: ವಾಟಾಳ್ ನಾಗರಾಜ್ ಗೆ ರೇಣುಕಾಚಾರ್ಯ ಸವಾಲು

03:00 PM Nov 24, 2020 | keerthan |

ದಾವಣಗೆರೆ: “ಡೊಂಬರಾಟದ ವಾಟಾಳ್ ನಾಗರಾಜ್ ನಿನಗೆ ತಾಕತ್ತಿದ್ದರೆ ಈ ರಾಜ್ಯ ಬಂದ್ ಮಾಡು ನೋಡೋಣ. ಮುಖ್ಯಮಂತ್ರಿಗಳ ಬಗ್ಗೆ ಕೇವಲವಾಗಿ ಮಾತಾಡುತ್ತೀರಾ. ಹುಷಾರ್!” ಹೀಗೆ ಸವಾಲು ಹಾಕಿದವರು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ

Advertisement

ದಾವಣಗೆರೆಯಲ್ಲಿ ಮಾತನಾಡಿದ ಅವರು, ವಾಟಾಳ್ ನಾಗರಾಜ್ ಬೂಟಾಟಿಕೆಯ ವ್ಯಕ್ತಿ. ಎಷ್ಟು ಅಕ್ರ‌ಮ ಮಾಡಿದ್ದಾರೆ ಎಂದರೆ ಮೈಸೂರಿನ ವರುಣ ಕ್ಷೇತ್ರದಲ್ಲಿ 70 ಎಕರೆ ಭೂಮಿ ಅಕ್ರ‌ಮವಾಗಿ ವಶ ಪಡಿಸಿಕೊಂಡಿದ್ದಾರೆ. ಇವರ ಜಮೀನಿನಲ್ಲಿ ಕೆಲಸ ಮಾಡುತ್ತಿರುವುದು ತಮಿಳರು. ವಾಟಾಳ್ ಬೆಂಗಳೂರಿನಲ್ಲಿ ಎಷ್ಟು ಸೈಟ್ ಮಾಡಿದ್ದಾರೆ ಎಂಬ ಬಗ್ಗೆ ನನ್ನ ಕಡೆ ದಾಖಲೆಗಳಿವೆ. ಮುಖ್ಯಮಂತ್ರಿಗಳ ಬಗ್ಗೆ ಕೆಟ್ಟ ಪದ ಬಳಕೆ ಮಾಡಿದ್ರೆ ಹುಷಾರ್ ಎಂದು ಎಚ್ಚರಿಸಿದರು.

ಸಿಎಂ ಗೆ ಯತ್ನಾಳ್ ಡೆಡ್ ಲೈನ್ ನೀಡಿದ ವಿಚಾರವಾಗಿ ಮಾತನಾಡಿದ ಅವರು, ಯಡಿಯೂರಪ್ಪನವರ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಡೆಡ್ ಲೈನ್ ಕೊಡುವುದು ಎಷ್ಟರ ಮಟ್ಟಿಗೆ ಸರಿ? ಪಕ್ಷದ ವರಿಷ್ಠರು ಪಕ್ಷದ ಶಾಸಕಾಂಗದ ಸದಸ್ಯರು ಯಡಿಯೂರಪ್ಪನವರನ್ನು ನಮ್ಮ ನಾಯಕರೆಂದು ತೀರ್ಮಾನ ಮಾಡಿದ್ದೇವೆ. ಯತ್ನಾಳ್ ಡೆಡ್ ಲೈನ್ ಕೊಡುವುದು ಸರಿಯಲ್ಲ ಎಂದರು.

ನಮ್ಮ ಪಕ್ಷದ ಮುಖಂಡರನ್ನು ಗೌರವಿಸಬೇಕು

ಹಾದಿ- ಬೀದಿಯಲ್ಲಿ ನಿಂತು ಮಾತನಾಡುವುದರಿಂದ ಪಕ್ಷದ ಗೌರವ ಕಡಿಮೆಯಾಗುವುದಿಲ್ಲ. ಯಾರು ಮಾತನಾಡುತ್ತಾರೋ ಅವರ ವರ್ಚಸ್ಸು ಕಡಿಮೆಯಾಗುತ್ತದೆ. ಇದು ಪಕ್ಷಕ್ಕೆ ಶೋಭೆ ತರುವ ವಿಚಾರವಲ್ಲ. ಸಿಎಂ ಸೀಟ್ ಖಾಲಿ ಇಲ್ಲ. ಮುಖ್ಯಮಂತ್ರಿ ಗಳ ಕುರ್ಚಿ ಕೂಡ ಖಾಲಿ‌ ಇಲ್ಲ ಎಂದು ಹೇಳಿದರು.

Advertisement

ಯಡಿಯೂರಪ್ಪ ಆಧುನಿಕ ಬಸವಣ್ಣ

ನಿಗಮಕ್ಕೆ 500 ಕೋಟಿ ಬಿಡುಗಡೆ ಮಾಡಿದ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಚರ್ಚೆ ಮಾಡಿ ಹಣ ಬಿಡುಗಡೆ ಮಾಡಿದ್ದಾರೆ. ಕೊಟ್ಟಿದ್ದು ತಪ್ಪೇನಿಲ್ಲ. ಅಂದು ಬಸವಣ್ಣನವರು ಸಾಮಾಜಿಕ ನ್ಯಾಯ ಕೊಟ್ಟಿದ್ದರು, ಅದೇ ರೀತಿ ಇಂದು ಯಡಿಯೂರಪ್ಪ ನವರು ನೀಡಿದ್ದಾರೆ. ಯಡಿಯೂರಪ್ಪ ಆಧುನಿಕ ಬಸವಣ್ಣ ಎಂದರು.

ಸಿ ಪಿ ಯೋಗೇಶ್ವರ ವಿರುದ್ಧ ಕಿಡಿ

ಪಕ್ಷದಲ್ಲಿ ಎರಡು ಮೂರು ಬಾರಿ ಗೆದ್ದವರಿಗೆ ಸಚಿವ ಸ್ಥಾನದ ಅವಕಾಶ ಕೊಡಿ. ಗೆದ್ದವರಿಗೆ ಮಾತ್ರ ಅವಕಾಶ ಕೊಡಿ ಎಂದು ಪಕ್ಷದ ವರಿಷ್ಠರು ಮುಖ್ಯಮಂತ್ರಿಗಳು ಎಲ್ಲರಿಗೂ ಕೇಳಿದ್ದೇನೆ. ಸೋತ ವ್ಯಕ್ತಿಯಿಂದ ಪಕ್ಷ ಅಧಿಕಾರಕ್ಕೆ ಬಂದಿಲ್ಲ. 105 ಶಾಸಕರ ಬೆಂಬಲದಿಂದ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದು ಸಿಪಿ ಯೋಗೇಶ್ವರ ವಿರುದ್ಧ ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next