ಜೈಪುರ್ : ಪ್ರಧಾನಿ ನರೇಂದ್ರ ಮೋದಿ ಅವರು ಇನ್ಮುಂದೆ ತಮ್ಮ ಭಾಷಣ ಆರಂಭಕ್ಕೂ ಮುನ್ನ ಭಾರತ್ ಮಾತಾ ಕೀ ಜೈ ಅನ್ನುವುದು ಬೇಡ. ಅನಿಲ್ ಅಂಬಾನಿ ಕೀ ಜೈ, ನಿರವ್ ಮೋದಿ ಕೀ ಜೈ, ಮೆಹುಲ್ ಚೋಕ್ಸಿ ಕೀ ಜೈ ಎಂದು ಘೋಷಣೆಗಳನ್ನು ಕೂಗಲಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ. ವಿಡಿಯೋ ನೋಡಿ
ರಾಜಸ್ಥಾನದ ಅಲ್ವಾರ್‌ನಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ರಾಹುಲ್ ಅವರು ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿ ಈ ಹೇಳಿಕೆ ನೀಡಿದ್ದಾರೆ.
ಪ್ರಧಾನಿಯವರೇ ನೀವು ಭಾರತ್ ಮಾತಾ ಅನ್ನುತ್ತಿರಲ್ಲಾ ಆದರೂ ರೈತರನ್ನು ಮರೆಯುತ್ತಿರಲ್ಲಾ ಎಂದು ಪ್ರಶ್ನಿಸಿದರು.