Advertisement

M.K. Stalin ಜನ್ಮದಿನಕ್ಕೆ ಚೀನೀ ಭಾಷೆಯಲ್ಲಿ ಶುಭಕೋರಿದ ತಮಿಳುನಾಡು ಬಿಜೆಪಿ!

12:00 AM Mar 02, 2024 | Team Udayavani |

ನವದೆಹಲಿ: ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್‌ ಶುಕ್ರವಾರ 71ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ರಾಜ್ಯ ಬಿಜೆಪಿಯು ಅವರಿಗೆ ಚೀನೀ ಭಾಷೆಯಾದ ಮ್ಯಾಂಡರಿನ್‌ನಲ್ಲಿ ಶುಭ ಕೋರಿದೆ. ಇತ್ತೀಚೆಗೆ ಇಸ್ರೋದ 2ನೇ ಉಡಾವಣಾ ಕೇಂದ್ರ ಉದ್ಘಾಟನೆ ವೇಳೆ ತ.ನಾಡು ಸರ್ಕಾರ ನೀಡಿದ್ದ ಜಾಹೀರಾತಿನಲ್ಲಿ ಚೀನೀ ರಾಕೆಟ್‌ನ ಚಿತ್ರವನ್ನು ಬಳಸಿದ್ದು ಭಾರೀ ಟೀಕೆಗೆ ಗುರಿಯಾಗಿತ್ತು. ಬೆನ್ನಲ್ಲೇ ಬಿಜೆಪಿ, “ಎಂ.ಕೆ.ಸ್ಟಾಲಿನ್‌ ಅವರ ಜನ್ಮದಿನದಂದು ಅವರ ನೆಚ್ಚಿನ ಭಾಷೆ(ಚೀನೀ)ಯಲ್ಲಿ ಶುಭಾಶಯ ಹೇಳುತ್ತಿದ್ದೇವೆ ಎಂದು ವ್ಯಂಗ್ಯವಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next