Advertisement
ಸ್ಯಾಮ್‌ಸಂಗ್, ಮೊಬೈಲ್ ಫೋನ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಕಂಪೆನಿ. ಎಲ್ಲರಿಗೂ ತಿಳಿದಿರುವಂತೆ ಮೊಬೈಲ್ ಫೋನ್ ಮಾರಾಟದಲ್ಲಿ ಜಗತ್ತಿನಲ್ಲಿ ನಂ.1 ಸ್ಥಾನ ಅಲಂಕರಿಸಿದೆ. ಈ ಮೊದಲು ಆನ್‌ಲೈನ್‌ಗಿಂತ ಆಫ್ಲೈನ್ (ಅಂಗಡಿ) ಮಾರಾಟಕ್ಕೆ ಸ್ಯಾಮ್‌ಸಂಗ್ ಒತ್ತು ನೀಡಿತ್ತು. ಸ್ಯಾಮ್‌ಸಂಗ್ ಫೋನ್‌ಗಳ ಹೆಚ್ಚಿನ ದರದಿಂದ ಗ್ರಾಹಕರು, ಶಿಯೋಮಿ, ರಿಯಲ್‌ಮಿ, ಆನರ್, ಆಸುಸ್‌ನಂಥ ಬ್ರಾಂಡ್‌ಗಳ ಮೊರೆ ಹೋದರು. ಸಹಜ ವಾಗೇ ಇದು ಸ್ಯಾಮ್‌ಸಂಗ್ ಮಾರಾಟದ ಪ್ರಮಾಣವನ್ನು ಕಡಿಮೆ ಮಾಡಿತು.
Related Articles
Advertisement
ಸೂಪರ್ ಅಮೋಲೆಡ್ ಪರದೆ: ಇದರ ಪರದೆ ಸೂಪರ್ ಅಮೋ ಎಲ್‌ಇಡಿ ಹೊಂದಿದೆ. ಇದರಿಂದ ಫೋನಿನ ಚಿತ್ರಗಳು, ವಿಡಿಯೋಗಳು ಚೆನ್ನಾಗಿ ಮೂಡಿಬರುತ್ತವೆ. ಈ ದರದಲ್ಲಿ ಸೂಪರ್ ಅಮೋಲೆಡ್ ಪರದೆ ನೀಡಿರುವುದು ಇದರ ಪ್ಲಸ್ ಪಾಯಿಂಟ್‌ಗಳಲ್ಲಿ ಒಂದು. ಇದು 6.4 ಇಂಚಿನ ಫುಲ್‌ಎಚ್‌ಡಿ ಪ್ಲಸ್, ಉತ್ತಮ ಡಿಸ್‌ಪ್ಲೇ ಹೊಂದಿದೆ. ಶೇ. 91ರಷ್ಟು ಪರದೆ ಮತ್ತು ದೇಹದ ಅನುಪಾತ ಹೊಂದಿದೆ.
ಎಕ್ಸಿನಾಸ್ 9611 ಪ್ರೊಸೆಸರ್: ಇದರಲ್ಲಿ ಸ್ಯಾಮ್‌ಸಂಗ್ ತಾನೇ ಅಭಿವೃದ್ದಿ ಪಡಿಸಿದ ಎಕ್ಸಿನಾಸ್ 9611 ಎಂಟು ಕೋರ್‌ಗಳ ಪ್ರೊಸೆಸರ್ ಇದೆ. ಇದು ಮಧ್ಯಮ ವರ್ಗದಲ್ಲಿ ಒಂದು ಹಂತಕ್ಕೆ ಶಕ್ತಿಶಾಲಿಯಾಗಿದೆ. (ನಾಲ್ಕು ಕೋರ್‌ಗಳು 2.3 ಗಿ.ಹ. ಮತ್ತು ನಾಲ್ಕು ಕೋರ್‌ಗಳು 1.7 ಗಿ.ಹ.) ಇದಕ್ಕೆ ಮಾಲಿ ಜಿ72 ಎಂಪಿ3 ಗ್ರಾಫಿಕ್ಸ್ ಪ್ರೊಸೆಸರ್ ಇದೆ. ಗೇಮ್‌ಗಳು ಸುಗಮವಾಗಿ ನಡೆಯಲು ಇದು ಸಹಾಯಕ ಎಂದು ಕಂಪೆನಿ ಹೇಳಿಕೊಂಡಿದೆ.
ಎರಡು ಸಿಮ್ ಕಾರ್ಡ್, ಎರಡಕ್ಕೂ 4ಜಿ ವೋಲ್ಟ್ ಇದೆ. ಮತ್ತು 512 ಜಿಬಿವರೆಗೂ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಪ್ರತ್ಯೇಕ ಸ್ಲಾಟ್ ಅನ್ನು ಮೊಬೈಲ್ ಹೊಂದಿದೆ. ಈ ಫೋನಿನಲ್ಲಿ ತಕ್ಕ ಮಟ್ಟಿಗೆ ಎಲ್ಲ ಅಂಶಗಳೂ ಚೆನ್ನಾಗಿವೆ. ಆದರೆ, ಮಧ್ಯಮ ವರ್ಗದ ಫೋನ್‌ಗಳಲ್ಲಿ ಈ ದರಕ್ಕೆ ಲೋಹದ ದೇಹಇರುತ್ತದೆ. ಸ್ಯಾಮ್‌ಸಂಗ್ ಇದಕ್ಕೆ ಪ್ಲಾಸ್ಟಿಕ್ ಬಾಡಿ ನೀಡಿದೆ. ಲೋಹದ ದೇಹ ಇದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಇದರ ವೈಶಿಷ್ಟ್ಯ
-4 ಜಿಬಿ ರ್ಯಾಮ್, 64 ಜಿಬಿ -ಆಂತರಿಕ ಸಂಗ್ರಹ: 14000 ರೂ. 6 ಜಿಬಿ ರ್ಯಾಮ್, 128 ಜಿಬಿ ಆಂತರಿಕ ಸಂಗ್ರಹ: 17000 ರೂ. -6.4 ಪರದೆ. ಸೂಪರ್ ಅಮೋ ಲೆಡ್ ಎಫ್ಎಚ್‌ಡಿಪ್ಲಸ್ ಡಿಸ್‌ಪ್ಲೇ -ಬ್ಯಾಟರಿ ಸಾಮರ್ಥ್ಯ 6000 ಎಂಎಎಚ್ -ವೇಗದ ಚಾರ್ಜರ್, ಟೈಪ್ ಸಿ ಕೇಬಲ್ -ಸ್ಯಾಮ್‌ಸಂಗ್ ಎಕ್ಸಿನಾಸ್ 9611 ಪ್ರೊಸೆಸರ್ -48 ಮೆ.ಪಿ. ಮುಖ್ಯ ಕ್ಯಾಮರಾ, 5 ಮೆ.ಪಿ. ಡೆಪ್ತ್ ಸೆನ್ಸರ್, 8 ಎಂಪಿ. ಅಲ್ಟ್ರಾ ವೈಡ್ ಸೆನ್ಸಾರ್ -ಮುಂಬದಿ 16 ಮೆ.ಪಿ. ಕ್ಯಾಮರಾ * ಕೆ.ಎಸ್. ಬನಶಂಕರ ಆರಾಧ್ಯ