Advertisement
ಭಗವಂತನ ಪೂರ್ಣ ಸನ್ನಿಧಾನ ಇದೆ ಎಂಬ ಕಾರಣಕ್ಕೆ ಭಗವದ್ಗೀತೆ ಎಂಬ ಹೆಸರು ಬಂತು. ಭಗವಂತನನ್ನು ಗೀತೆಯಲ್ಲಿ ಕಾಣಲು ಪ್ರಯತ್ನಿಸಿದರೆ ಗೀತಾ ಪರ್ಯಾಯ ಎನ್ನುವುದಕ್ಕೆ ಅನ್ವರ್ಥಕ. ಅಧ್ಯಯನದ ಜತೆ ಅಧ್ಯಾಪನವನ್ನೂ ನಡೆಸಿದಂತಾಗುತ್ತದೆ. ಭಗವದ್ಗೀತೆಗೆ ಎಲ್ಲ ಆಚಾರ್ಯರು ಭಾಷ್ಯವನ್ನು ಬರೆದಿದ್ದಾರೆ. ಇವೆಲ್ಲವನ್ನೂ ಒಳಗೊಂಡಂತೆ ಎಲ್ಲ 700 ಶ್ಲೋಕಗಳ ಪಾಠ ಪ್ರವಚನದ ಚಿಂತನಕ್ರಮವನ್ನು ಲೋಕಕಲ್ಯಾಣಾರ್ಥವಾಗಿ ಚತುರ್ಥ ಪರ್ಯಾಯದ ಅವಧಿಯಲ್ಲಿ ಶ್ರೀಮದಾಚಾರ್ಯರ ಸರ್ವಜ್ಞಪೀಠದಲ್ಲಿ ಅಖಂಡವಾಗಿ ಸಮರ್ಪಿಸಲು ಸಂಕಲ್ಪಿಸಿದ್ದೇವೆ.
ಮಾಮಕಾಃ ಪಾಂಡವಾಶೆòವ ಕಿಮಕುರ್ವತ ಸಂಜಯ||
ಭಗವದ್ಗೀತೆಯ ಮೊದಲ ಶ್ಲೋಕದ ಮೊದಲ ಶಬ್ದ(ಧರ್ಮ)ದಲ್ಲಿರುವ “ಧರ್’-ಕೊನೆಯ “ಮ’ ಕಾರವನ್ನು ಸೇರಿಸಿದರೆ “ಧರ್ಮ’ ಹೀಗೆ ಗೀತೆಯ ಆತ್ಯಂತಿಕ ಅಕ್ಷರಗಳನ್ನು ಜೋಡಿಸಿದರೆ ಧರ್ಮದ ಸ್ವರೂಪ ಕಾಣುತ್ತೇವೆ. ಪ್ರತಿಯೊಂದು ಶ್ಲೋಕದಲ್ಲಿಯೂ ಸ್ವಾರಸ್ಯಗಳಿವೆ. ಗೀತೆಗೆ ಸಾವಿರಾರು ವ್ಯಾಖ್ಯಾನಗಳು ಬಂದಿವೆ, ಬರುತ್ತಿವೆ. ಆದ್ದರಿಂದ ಗೀತೆಯು ನಿತ್ಯಗರ್ಭಿಣಿ ಮಾತೆ. ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811