Advertisement

ಈ ವರ್ಷದ ಮೊದಲ ಚಂದ್ರಗ್ರಹಣ ದೇಶದಲ್ಲೂ ಗೋಚರಿಸಲಿದೆ

09:41 PM May 24, 2021 | Team Udayavani |

ನವದೆಹಲಿ: ಈ ವರ್ಷದ ಮೊದಲ ಚಂದ್ರಗ್ರಹಣವು ಭಾರತದ ಈಶಾನ್ಯ ಭಾಗದಲ್ಲಿ, ಪಶ್ಚಿಮ ಬಂಗಾಳದ ಕೆಲವು ಕಡೆ, ಒಡಿಶಾದ ಕರಾವಳಿ ಪ್ರಾಂತ್ಯಗಳಲ್ಲಿ ಹಾಗೂ ಅಂಡಮಾನ್‌-ನಿಕೋಬಾರ್‌ನ ಕೆಲವು ದ್ವೀಪಗಳಲ್ಲಿ ಮೇ 26ರಂದು ಗೋಚರಿಸಲಿದೆಯಾದರೂ, ಕೆಲವೇ ಕೆಲವು ನಿಮಿಷಗಳವರೆಗೆ ಮಾತ್ರವೇ ಅದನ್ನು ನೋಡಬಹುದಾಗಿದೆ.

Advertisement

ಒಡಿಶಾದ ಪುರಿ, ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಸಂಜೆ 6:21ರಿಂದ ಕೇವಲ 2 ನಿಮಿಷಗಳವರೆಗೆ ನೋಡಬಹುದು. ಆದರೆ, ಪೋರ್ಟ್‌ಬ್ಲೇರ್‌ನಲ್ಲಿ ಗ್ರಹಣವು ಸಂಜೆ 5:38ರಿಂದ 45 ನಿಮಿಷಗಳವರೆಗೆ ನೋಡಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಚಂದ್ರಗ್ರಹಣದ ಪೂರ್ತಿ ವಿದ್ಯಮಾನ ಮೇ 26ರಂದು ಮಧ್ಯಾಹ್ನ 3:15ರಿಂದ ಸಂಜೆ 6:33ರವರೆಗೆ ನಡೆಯುತ್ತದೆ. ಗ್ರಹಣದ ಮಧ್ಯಭಾಗವು, ಸಂಜೆ 4:39ರಿಂದ 4:58ರವರೆಗೆ ಜರುಗುತ್ತದೆ.

ಇದನ್ನೂ ಓದಿ :ಸೋಂಕಿತರ ಚಿಕಿತ್ಸಾ ಹಂತ ನಿರ್ಧರಿಸಲು ರಕ್ತ ಪರೀಕ್ಷೆ : ಸಚಿವ ಆರ್ ಅಶೋಕ್

Advertisement

Udayavani is now on Telegram. Click here to join our channel and stay updated with the latest news.

Next