Advertisement

ಜೂನ್ 5-6ರಂದು ನಭೋ ಮಂಡಲದಲ್ಲಿ ಸ್ಟ್ರಾಬೆರಿ ಚಂದ್ರಗ್ರಹಣ…ಏನಿದರ ವಿಶೇಷತೆ?

05:15 PM Jun 04, 2020 | Nagendra Trasi |

ನವದೆಹಲಿ:2020ರ ಅಪರೂಪದ ವಿದ್ಯಮಾನ ಎಂದು ಕರೆಯಲಾಗುವ ಎರಡನೇ ಚಂದ್ರಗ್ರಹಣ ಜೂನ್ 5ಹಾಗೂ 6ರ ರಾತ್ರಿ ಸಂಭವಿಸಲಿದ್ದು, ಈ ಬಾರಿಯದ್ದು ಸ್ಟ್ರಾಬೆರಿ ಚಂದ್ರಗ್ರಹಣವಾಗಿರುವುದು ವಿಶೇಷತೆಯಾಗಿದೆ.

Advertisement

ಈ ವರ್ಷದ ಜನವರಿ 10ರಂದು ಪ್ರಥಮ ಚಂದ್ರಗ್ರಹಣ ಸುಮಾರು 4ಗಂಟೆ ಐದು ನಿಮಿಷಗಳ ಕಾಲ ಭಾರತದಲ್ಲಿ ಗೋಚರಿಸಿತ್ತು. ಇದೀಗ ಎರಡನೇ ಸ್ಟ್ರಾಬೆರಿ ಚಂದ್ರಗ್ರಹಣ ಜೂನ್ 5ಮತ್ತು 6ರ ರಾತ್ರಿ ಸಂಭವಿಸಲಿದೆ ಎಂದು ವರದಿ ತಿಳಿಸಿದೆ.

ಈ ಬಾರಿಯ ಚಂದ್ರಗ್ರಹಣವನ್ನು Penumbral Eclipse ಎಂದು ಹೆಸರಿಸಲಾಗಿದೆ. ಈ ಖಗೋಳ ವಿಸ್ಮಯವು ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ದಕ್ಷಿಣ ಅಮೆರಿಕ, ಫೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ, ಅಂಟಾರ್ಟಿಕಾ ಭಾಗಗಳಲ್ಲಿ ಗೋಚರಿಸಲಿದೆ ಎಂದು ವರದಿ ವಿವರಿಸಿದ್ದು, ಭಾರತದಾದ್ಯಂತ ಈ ಚಂದ್ರಗ್ರಹಣ ಗೋಚರಿಸಲಿದೆ.

ಸ್ಟ್ರಾಬೆರಿ ಚಂದ್ರಗ್ರಹಣ ಜೂನ್ 5ರಂದು ರಾತ್ರಿ 11.15ಕ್ಕೆ ಆರಂಭವಾಗಲಿದ್ದು, ಜೂನ್ 6ರಂದು 12.54ಕ್ಕೆ ಪೂರ್ಣ ಪ್ರಮಾಣದಲ್ಲಿ ಗ್ರಹಣ ಗೋಚರಿಸಲಿದ್ದು, ಜೂನ್ 6ರ ಬೆಳಗ್ಗಿನ ಜಾವ 2.34ಕ್ಕೆ ಪೂರ್ಣಗೊಳ್ಳಲಿದೆ. ನಾಳೆ ಚಂದ್ರನ ಮೇಲ್ಮೈ ಶೇ.75ರಷ್ಟು ಭಾಗವು ಭೂಮಿಯಿಂದ ಭಾಗಶಃ ಮುಚ್ಚಿರುವುದರಿಂದ ಅದರ ಹೊರಭಾಗದ ನೆರಳು ಮಾತ್ರ ಗೋಚರಿಸಬಹುದು. ಈ ನಿಟ್ಟಿನಲ್ಲಿ ಗ್ರಹಣ ಪೂರ್ಣಪ್ರಮಾಣದಲ್ಲಿ ಗೋಚರವಾಗದಿರಬಹುದು ಎಂದು ವಿಜ್ಞಾನಿಗಳು
ತಿಳಿಸಿದ್ದಾರೆ.

ಏನಿದು ಸ್ಟ್ರಾಬೆರಿ ಚಂದ್ರಗ್ರಹಣ?
ಖಗ್ರಾಹ, ಖಂಡಗ್ರಾಸ, ತೋಳಚಂದ್ರಗ್ರಹಣ ಹೀಗೆ ಹಲವಾರು ರೀತಿಯ ಹೆಸರಿನ ಚಂದ್ರಗ್ರಹಣದ ಬಗ್ಗೆ ಓದಿದ್ದೀರಿ. ಈ ಬಾರಿಯದ್ದು ಸ್ಟ್ರಾಬೆರಿ ಚಂದ್ರಗ್ರಹಣ…ಏನಿದು? ಯಾಕೆಂದರೆ ಇದು ಸ್ಟ್ರಾಬೆರಿ ಹಣ್ಣುಗಳ ಸೀಸನ್ ಆಗಿದೆ. ಈ ನಿಟ್ಟಿನಲ್ಲಿ ಜೂನ್ ತಿಂಗಳಿನಲ್ಲಿ ಸಂಭವಿಸುತ್ತಿರುವ ಪೂರ್ಣ ಚಂದ್ರಗ್ರಹಣಕ್ಕೆ ಸ್ಟ್ರಾಬೆರಿ ಎಂದು ಹೆಸರಿಸಲಾಗಿದೆಯಂತೆ. ಅದೇ ರೀತಿ ರೋಸ್ ಮೂನ್, ಹಾಟ್ ಮೂನ್ ಇತ್ಯಾದಿ ಹೆಸರುಗಳನ್ನು ಈಗಾಗಲೇ ಇಡಲಾಗಿದೆ. ಸ್ಟ್ರಾಬೆರಿ ಚಂದ್ರಗ್ರಹಣ ಮೂರು ಗಂಟೆ 18 ನಿಮಿಷಗಳ ಕಾಲದ್ದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next