ಮಡಿಕೇರಿ : ಇಲ್ಲಿನ ನಗರಸಭೆಯ ಆವರಣದಲ್ಲಿ ಸಾರ್ವಜನಿಕರಿಗೆ ಸರ್ಕಾರದ ಸುತ್ತೋಲೆಗಳನ್ನು ಬಿತ್ತರಿಸಲು ಅಳವಡಿಸಲಾಗಿದ್ದ ಪ್ರೊಜೆಕ್ಟರ್‌ನಲ್ಲಿ ಜುಲೈ 6 ರಂದು ಮಧ್ಯಾಹ್ನ ಇದ್ದಕ್ಕಿದ್ದಂತೆ ಬ್ಲೂ ಫಿಲ್ಮ್ ಪ್ರದರ್ಶನಗೊಂಡು ಸಾರ್ವಜನಿಕರು ಅಸಹ್ಯಪಡುವಂತಾಗಿದೆ. ಈ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ನೀಲಿ ಚಿತ್ರ ಪ್ರದರ್ಶನಗೊಳ್ಳುತ್ತಿದ್ದಂತೆ ಬೆಚ್ಚಿ ಬಿದ್ದ ಸಿಬಂದಿಗಳು ಹೌಹಾರಿದ್ದಾರೆ. ಏನು ಮಾಡುವುದು ಎಂದು ತೋಚದೆ ಅಲ್ಲಿದ್ದ ಸಿಬಂದಿಯೊಬ್ಬರು ಪ್ರೊಜೆಕ್ಟರ್ ಆಫ್ ಮಾಡಿದ್ದಾರೆ.
ಸುಮಾರು 5 ನಿಮಷಗಳ ಕಾಲ ಚಿತ್ರ ಪ್ರದರ್ಶನಗೊಂಡಿದ್ದು, ಇದಕ್ಕೆ ಕಾರಣರಾದವರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ನಗರ ಸಭಾ ಸಿಬಂದಿಗಳು, ಅಧ್ಯಕ್ಷರು ಒತ್ತಯಾಸಿದ್ದಾರೆ.
ಜಿಲ್ಲಾಧಿಕಾರಿ ಅವರು ನಗರ ಸಭೆಯ ಯೋಜನಾ ನಿರ್ದೇಶಕ ಮೊಹಮದ್ ಮುನೀರ್ ಅವರ ಬಳಿ ವರದಿ ಕೇಳಿದ್ದಾರೆ. ಇದೀಗ ನಗರಸಭೆಯ ಸಿಬಂದಿಗಳ ವಿಚಾರಣೆ ನಡೆಸಲಾಗುತ್ತಿದೆ.
ಪೊಲೀಸರಿಗೆ ದೂರು ನೀಡಿ ಪ್ರಕರಣ ದಾಖಲಿಸುವ ಸಾಧ್ಯತೆಗಳಿವೆ.