Advertisement

ಸನ್‌ರೈಸರ್ಸ್ ಎದುರು 7 ವಿಕೆಟ್‌ಗಳ ಜಯ ಸಾಧಿಸಿದ ಲಕ್ನೋ ಸೂಪರ್ ಜೈಂಟ್ಸ್

07:48 PM May 13, 2023 | Team Udayavani |

ಹೈದರಾಬಾದ್:  ಇಲ್ಲಿ ಶನಿವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಏಳು ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ.

Advertisement

ಲಕ್ನೋ ಸೂಪರ್ ಜೈಂಟ್ಸ್ ಇನ್ನಿಂಗ್ಸ್‌ನಲ್ಲಿ ಪ್ರೇರಕ್ ಮಂಕಡ್ ಅಜೇಯ ಅರ್ಧಶತಕ ಬಾರಿಸುವ ಮೂಲಕ ಗೆಲುವಿನಲ್ಲಿ ದೊಡ್ಡ ಪಾತ್ರವಹಿಸಿದರು.

ಸನ್ ರೈಸರ್ಸ್ ಹೈದರಾಬಾದ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟ್ಸ್ ಮ್ಯಾನ್ ಗಳು ತಮ್ಮ ಆರಂಭವನ್ನು ಪರಿವರ್ತಿಸಲು ವಿಫಲವಾದ ನಂತರ ಆರು ವಿಕೆಟ್‌ಗಳಿಗೆ 182 ರನ್ ಗಳಿಸಿತು. ಪ್ರತ್ಯುತ್ತರವಾಗಿ, ಲಕ್ನೋ ಮೂರು ಪಂದ್ಯಗಳ ನಂತರ ಗೆಲುವಿನ ಹಾದಿಗೆ ಮರಳಿ
ಇನ್ನೂ ನಾಲ್ಕು ಎಸೆತಗಳು ಬಾಕಿ ಇರುವಂತೆಯೇ ಗೆಲುವಿನತ್ತ ಸಾಗಿತು.

ಅಜೇಯ 45 ಎಸೆತಗಳಲ್ಲಿ 64 ರನ್ ಗಳಿಸಿದ ಮಂಕಡ್ ಜತೆಗೆ, ಮಾರ್ಕಸ್ ಸ್ಟೋನಿಸ್ (40) ಮತ್ತು ನಿಕೋಲಸ್ ಪೂರನ್ (ಔಟಾಗದೆ 44) ತಮ್ಮ ಪ್ಲೇಆಫ್ ಭರವಸೆಯನ್ನು ಜೀವಂತವಾಗಿರಿಸಲು ಅಮೂಲ್ಯ ಕೊಡುಗೆ ನೀಡಿದರು. ಲಕ್ನೋ 13 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

ಇದಕ್ಕೂ ಮೊದಲು, ವಿಕೆಟ್‌ಕೀಪರ್-ಬ್ಯಾಟರ್ ಹೆನ್ರಿಚ್ ಕ್ಲಾಸೆನ್ ಆತಿಥೇಯ ಹೈದರಾಬಾದ್ ತಂಡದ ಪರ 29 ಎಸೆತಗಳಲ್ಲಿ 47 ರನ್ ಗಳಿಸಿದರು.
ಲಕ್ನೋ ಪರ, ಸ್ಪಿನ್ ಆಲ್‌ರೌಂಡರ್ ಕೃನಾಲ್ ಪಾಂಡ್ಯ (2/24) ಪಡೆದರು.

Advertisement

ಸಂಕ್ಷಿಪ್ತ ಸ್ಕೋರ್

ಸನ್‌ರೈಸರ್ಸ್ ಹೈದರಾಬಾದ್: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 182 (ಹೆನ್ರಿಚ್ ಕ್ಲಾಸೆನ್ 47; ಕೃನಾಲ್ ಪಾಂಡ್ಯ 2/24)

ಲಕ್ನೋ ಸೂಪರ್ ಜೈಂಟ್ಸ್‌: 19.2 ಓವರ್‌ಗಳಲ್ಲಿ 3 ವಿಕೆಟ್‌ಗೆ 185 (ಪ್ರೇರಕ್ ಮಂಕಡ್ ಔಟಾಗದೆ 64; ಗ್ಲೆನ್ ಫಿಲಿಪ್ಸ್ 1/10)

Advertisement

Udayavani is now on Telegram. Click here to join our channel and stay updated with the latest news.

Next