Advertisement

ಲಕ್ನೋ ಪ್ರದೇಶಗಳ ಹೆಸರು ಬದಲಿಸಲು ತೀರ್ಮಾನ

09:05 PM Sep 25, 2022 | Team Udayavani |

ಲಕ್ನೋ: ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ದೇಶದ ಹಲವು ನಗರಗಳ ಹೆಸರುಗಳು ಬದಲಾಗುತ್ತಿವೆ. ಇದಕ್ಕೆ ಹೊಸ ಸೇರ್ಪಡೆಯೆಂಬಂತೆ ಲಕ್ನೋ ನಗರಪಾಲಿಕೆ ಕೂಡ ಹಲವು ಹೆಸರುಗಳನ್ನು ಬದಲಿಸಲು ತೀರ್ಮಾನಿಸಿದೆ.

Advertisement

ಈ ವರ್ಷಾಂತ್ಯದಲ್ಲಿ ನಗರಪಾಲಿಕೆ ಚುನಾವಣೆಯಿದೆ. ಅದಕ್ಕೂ ಮುನ್ನವೇ ಸ್ವಾತಂತ್ರ್ಯ ಹೋರಾಟಗಾರರು, ಬಲಪಂಥೀಯ ಚಿಂತಕರ ಹೆಸರನ್ನು ವಿವಿಧ ಪ್ರದೇಶಗಳಿಗೆ ಇಡಲು ನಿರ್ಧರಿಸಲಾಗಿದೆ.

ಲಕ್ನೋದಲ್ಲಿನ ಬರ್ಲಿಂಗ್ಟನ್‌ ಕ್ರಾಸಿಂಗ್‌ ಅನ್ನು ವಿಹಿಂಪ ನಾಯಕ ಅಶೋಕ್‌ ಸಿಂಘಾಲ್‌ ಎಂದು, ಸರ್ವೋದಯ ನಗರದ ದ್ವಾರಕ್ಕೆ ಸಾವರ್ಕರ್‌ ದ್ವಾರವೆಂದು, ನಿರಾಳ ನಗರದ ಟಿಕೋನ ಪಾರ್ಕ್‌ಗೆ ಜನಸಂಘದ ಸಂಸ್ಥಾಪಕ ಶ್ಯಾಮಪ್ರಸಾದ್‌ ಮುಖರ್ಜಿ ಉದ್ಯಾನವೆಂದು ಹೆಸರಿಸಲು ತೀರ್ಮಾನಿಸಲಾಗಿದೆ.

ಈ ಹೆಜ್ಜೆಯನ್ನು ಪ್ರತಿಪಕ್ಷಗಳು ರಾಜಕೀಯಪ್ರೇರಿತ ಎಂದು ಜರಿದಿವೆ.

Advertisement

Udayavani is now on Telegram. Click here to join our channel and stay updated with the latest news.

Next