Advertisement
1982ರಲ್ಲಿ ಬಾಂಬೇ ಸ್ಯಾಪರ್ ಮೂಲಕ ಸೈನಿಕ ಜೀವನ ಆರಂಭಿ ಸಿದ್ದ ಲೆ|ಜ| ಪಾಂಡೆಯವರು ಸಾಂಪ್ರ ದಾಯಿಕ ಮತ್ತು ಉಗ್ರ ವಿರೋಧಿ ಕಾರ್ಯಾಚರಣೆಗಳ ಸಹಿತ ಹಲವು ಉನ್ನತ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಜಮ್ಮು ಕಾಶ್ಮೀರದಲ್ಲಿ “ಆಪರೇಶನ್ ಪರಾ ಕ್ರಮ್’ ಸಂದರ್ಭ ಎಲ್‌ಒಸಿಯಲ್ಲಿ ಅವರು ಎಂಜಿನಿಯರ್ ರೆಜಿಮೆಂಟ್‌ನ ಮುಖ್ಯಸ್ಥರಾಗಿದ್ದರು. ವಿಶ್ವಸಂಸ್ಥೆಯ ಶಾಂತಿ ಪಾಲನ ಪಡೆಯ ಸದಸ್ಯರಾಗಿ ಇಥಿಯೋಪಿಯಾ ಮತ್ತು ಎರೀಟ್ರಿಯಾ ಗಳಲ್ಲೂ ಕಾರ್ಯನಿರ್ವಹಿಸಿದ್ದಾರೆ. ಪರಮ ವಿಶಿಷ್ಟ ಸೇವಾ ಪದಕ, ಅತೀ ವಿಶಿಷ್ಟ ಸೇವಾ ಪದಕ, ವಿಶಿಷ್ಟ ಸೇವಾ ಪದಕಗಳನ್ನು ಪಡೆದಿದ್ದಾರೆ. ಇದೇ ಎಪ್ರಿಲ್‌ನಲ್ಲಿ ಸೇನಾ ಮುಖ್ಯಸ್ಥ ಜ| ಎಂ.ಎಂ. ನರವಾಣೆ ನಿವೃತ್ತಿ ಹೊಂದ ಲಿದ್ದು, ಸೇನಾ ಸಂಪ್ರದಾಯದ ಪ್ರಕಾರ ಹಿರಿಯರಾದ ಲೆ|ಜ| ಪಾಂಡೆ ಆಗ ನೂತನ ಸೇನಾ ಮುಖ್ಯಸ್ಥರಾಗುತ್ತಾರೆ.
ಭಾರತೀಯ ಸೇನೆಯ ನಾರ್ದರ್ನ್ ಕಮಾಂಡ್‌ನ ಕಮಾಂಡಿಂಗ್ ಇನ್ ಚೀಫ್ ಆಗಿ ಲೆ|ಜ| ಉಪೇಂದ್ರ ದ್ವಿವೇದಿ ಅವರು ಮಂಗಳವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಇದುವರೆಗೆ ಈ ಹುದ್ದೆಯಲ್ಲಿದ್ದ ಕಾರ್ಗಿಲ್ ಯುದ್ಧವೀರ ಲೆ|ಜ| ಯೋಗೇಶ್ ಕುಮಾರ್ ಜೋಶಿ ಸೋಮವಾರ ನಿವೃತ್ತಿ ಹೊಂದಿದ್ದರು. ಉಧಂಪುರದಲ್ಲಿರುವ ಯುದ್ಧ ಸ್ಮಾರಕಕ್ಕೆ ಗೌರವ ಸಲ್ಲಿಸಿದ ಬಳಿಕ ಲೆ|ಜ| ದ್ವಿವೇದಿಯವರು ಅಧಿಕಾರ ವಹಿಸಿಕೊಂಡರು ಎಂದು ಭಾರತೀಯ ಸೇನೆ ಟ್ವೀಟ್ ಮಾಡಿದೆ. 1984ರಲ್ಲಿ ಜಮ್ಮು ಕಾಶ್ಮೀರ ರೈಫಲ್ಸ್‌ನ 18ನೇ ಬೆಟಾಲಿಯನ್ ಮೂಲಕ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಣೆ ಆರಂಭಿಸಿದ್ದ ಲೆ|ಜ| ದ್ವಿವೇದಿಯವರು 35 ವರ್ಷಗಳ ಸೈನಿಕ ಜೀವನದಲ್ಲಿ ಹಲವಾರು ಪ್ರಧಾನ ಹುದ್ದೆಗಳನ್ನು ನಿರ್ವಹಿಸಿದ್ದಾರೆ.