Advertisement

ಭಾರತೀಯ ಸೇನೆಗೆ ಮತ್ತಷ್ಟು ಬಲ: ಕೆ-9 ವಜ್ರ ಹೊವಿಟ್ಜರ್‌ ಸೇನೆಗೆ ಸೇರ್ಪಡೆ

12:58 AM Feb 19, 2021 | Team Udayavani |

ಹೊಸದಿಲ್ಲಿ : ಸ್ವಯಂಚಾಲಿತವಾಗಿ ತಿರುಗಬಲ್ಲ ಅತ್ಯಾಧುನಿಕ ಕೆ-9 ವಜ್ರ ಹೊವಿಟ್ಜರ್‌ ತೋಪುಗಳ ಪೈಕಿ ನೂರನೇ ತೋಪನ್ನು ಭೂಸೇನಾ ಮುಖ್ಯಸ್ಥ ಜ| ಎಂ.ಎಂ. ನರವಾಣೆ ಅವರು ಗುರುವಾರ ಸೇನಾ ಸೇವೆಗೆ ಸಮರ್ಪಿಸಿದರು.

Advertisement

ಸೇನೆಯು 100 ಕೆ-9 ವಜ್ರ ಹೊವಿಟ್ಜರ್‌ಗಳಿಗೆ ಬೇಡಿಕೆ ಸಲ್ಲಿಸಿತ್ತು. ಈ ಪೈಕಿ ಮೂರನ್ನು ಲಡಾಖ್‌ನ ಗರಿಷ್ಠ ಎತ್ತರದ ಸ್ಥಳದಲ್ಲಿ ಪರೀಕ್ಷೆಗಾಗಿ ನಿಯೋಜಿಸಲಾಗಿದೆ.

ಮೂರು ಹೊವಿಟ್ಜರ್‌ಗಳು ಮಂಗಳವಾರ ಲಡಾಖ್‌ಗೆ ಆಗಮಿಸಿದ್ದು, ಎತ್ತರದ ಸ್ಥಳಗಳಲ್ಲಿ ಅವುಗಳ ಕಾರ್ಯಾಚರಣೆ ಸಾಮರ್ಥ್ಯ ತಿಳಿಯಲು ಒಯ್ಯಲಾಗುತ್ತಿದೆ ಎಂದು ಸೇನಾಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next