ಮುಂಬೈ: ವಾಣಿಜ್ಯ ನಗರಿ ಮುಂಬೈಯ ದಹಿಸರ್-ಭಯಾಂದರ್ ಸೇತುವೆ ನಿರ್ಮಾಣದ ಅಂದಾಜು 3,816 ಕೋಟಿ ರೂಪಾಯಿ ಮೊತ್ತದ ಬೃಹತ್ ಗುತ್ತಿಗೆ ಪಡೆದಿರುವುದಾಗಿ ಎಲ್ & ಟಿ ತಿಳಿಸಿದೆ. ಇದು 4.5 ಕಿಲೋ ಮೀಟರ್ ಉದ್ದದ ಸೇತುವೆ ಕಾಮಗಾರಿಯಾಗಿದೆ ಎಂದು ವರದಿ ವಿವರಿಸಿದೆ.
ಇದನ್ನೂ ಓದಿ:Tragic: ದೇವರ ದರ್ಶನದಿಂದ ವಾಪಾಸಾಗುವ ವೇಳೆ ದುರಂತ: ಕಾರು– ಟ್ರಕ್ ಅಪಘಾತದಲ್ಲಿ 8ಮಂದಿ ಸಾವು
4.5 ಕಿಲೋ ಮೀಟರ್ ಉದ್ದದ ಸೇತುವೆ ನಿರ್ಮಾಣವಾಗುವ ಮೂಲಕ ದಹಿಸರ್ – ಭಯಾಂದರ್ ನಡುವಿನ ಪ್ರಯಾಣದ ಅವಧಿ ಇಳಿಕೆಯಾಗಲಿದೆ. ಪ್ರಸ್ತುತ ಈ ಮಾರ್ಗದಲ್ಲಿ ಕ್ರಮಿಸಲು 45 ನಿಮಿಷಗಳ ಅಗತ್ಯವಿದೆ.
ಆದರೆ ದಹಿಸರ್ ಭಯಾಂದರ್ ಸೇತುವೆ ನಿರ್ಮಾಣದ ಗುತ್ತಿಗೆಯ ನಿಖರ ಮೊತ್ತವನ್ನು ಎಲ್ & ಟಿ ಕಂಪನಿ ಬಹಿರಂಗಗೊಳಿಸಿಲ್ಲ. ಈ ಬೃಹತ್ ಮೊತ್ತದ ಗುತ್ತಿಗೆ 2,500 ಕೋಟಿ ರೂಪಾಯಿಂದ, 5,000 ಸಾವಿರ ಕೋಟಿಯದ್ದಾಗಿದೆ ಎಂದು ಮೂಲಗಳು ತಿಳಿಸಿವೆ.
ಗುತ್ತಿಗೆ ಬಿಡ್ಡಿಂಗ್ ಪ್ರಕ್ರಿಯೆ ವಿಳಂಬವಾದ ಹಿನ್ನೆಲೆಯಲ್ಲಿ ಸೇತುವೆ ಕಾಮಗಾರಿ ವಿಳಂಬವಾಗಿದೆ. ಕಳೆದ ವರ್ಷ ಈ ಗುತ್ತಿಗೆ ಕಾಮಗಾರಿಗಾಗಿ ಟೆಂಡರ್ ಕರೆಯಲಾಗಿತ್ತು. ಇದು ಅಂದಾಜು 3,186 ಕೋಟಿ ರೂಪಾಯಿ ಮೊತ್ತದ ಗುತ್ತಿಗೆಯಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಪ್ರಸ್ತಾವಿತ 4.5 ಕಿಲೋ ಮೀಟರ್ ಉದ್ದದ ಸೇತುವೆಯಲ್ಲಿ 1.5 ಕಿಲೋ ಮೀಟರ್ ಉದ್ದ ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೋರೇಶನ್ ವ್ಯಾಪ್ತಿಗೆ ಒಳಪಟ್ಟಿದ್ದು, ಇನ್ನುಳಿದ 3 ಕಿಲೋ ಮೀಟರ್ ಉದ್ದ ಮೀರಾ-ಭಯಾಂದರ್ ಮುನ್ಸಿಪಲ್ ಕಾರ್ಪೋರೇಶನ್ ವ್ಯಾಪ್ತಿಗೆ ಒಳಪಟ್ಟಿದ್ದು, ಈ ಕಾಮಗಾರಿಯನ್ನು ಬಿಎಂಸಿ ಕಾರ್ಯಗತಗೊಳಿಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.