Advertisement

ತೆಲಂಗಾಣ : ಎಲ್ಲ 17 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸ್ಪರ್ಧೆ

11:24 AM Feb 21, 2019 | udayavani editorial |

ಹೈದರಾಬಾದ್‌ : ತೆಲಂಗಾಣದ ಎಲ್ಲ 17 ಲೋಕಸಭಾ ಕ್ಷೇತ್ರಗಳಿಗೆ ಸ್ಪರ್ಧಿಸಲು ಕಾಂಗ್ರೆಸ್‌ ನಿರ್ಧರಿಸಿದೆ ಎಂದು ಪಕ್ಷದ ಉನ್ನತ ಪದಾಧಿಕಾರಿಯೋರ್ವರು ಇಂದು ಗುರುವಾರ ತಿಳಿಸಿದ್ದಾರೆ. 

Advertisement

ತೆಲಂಗಾಣದ ಎಲ್ಲ 17 ಲೋಕಸಭಾ ಸ್ಥಾನಗಳಿಗೆ ಕಾಂಗ್ರೆಸ್‌ ಸ್ಪರ್ಧಿಸಬೇಕೆಂಬ ಶಿಫಾರಸನ್ನು ಕೇಂದ್ರ ನಾಯಕತ್ವಕ್ಕೆ ಕಳುಹಿಸಲಾಗಿದೆ ಎಂದು ತೆಲಂಗಾಣದ ಎಐಸಿಸಿ ಪ್ರಭಾರಿ ಆರ್‌ ಸಿ ಖುಂಟಿಯಾ ಹೇಳಿದರು. 

ಕಳೆದ ವರ್ಷ ಡಿಸೆಂಬರ್‌ 7ರಂದು ನಡೆದಿದ್ದ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ   ಕಾಂಗ್ರೆಸ್‌, ಟಿಡಿಪಿ, ಸಿಪಿಐ ಮತ್ತು ತೆಲಂಗಾಣ ಜನ ಸಮಿತಿ ಪಕ್ಷ ಜತೆಗೂಡಿ ಪ್ರಜಾಕುಟಮಿ ಬ್ಯಾನರ್‌ ನಡಿ ಸ್ಪರ್ಧಿಸಿದ್ದವು. ಆದರೆ ಲೋಕಸಭಾ ಚುನಾವಣೆಯಲ್ಲಿ ತನ್ನನ್ನು ಬೆಂಬಲಿಸುವಂತೆ ಕಾಂಗ್ರೆಸ್‌ ತನ್ನ ಈ ಮಿತ್ರ ಪಕ್ಷಗಳನ್ನು ಕೇಳಿಕೊಂಡಿದೆ ಎಂದು ಖುಂಟಿಯಾ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next